ADVERTISEMENT

ಕರಾವಳಿಯಲ್ಲಿ ಮುಂದುವರಿದ ಮಳೆ: ಯಲ್ಲೊ, ಆರೆಂಜ್‌ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 14:17 IST
Last Updated 19 ಜೂನ್ 2020, 14:17 IST

ಉಡುಪಿ: ಜಿಲ್ಲೆಯಲ್ಲಿ ವರುಣನ ಆರ್ಭಟನ ಮುಂದುವರಿದಿದೆ. ಶುಕ್ರವಾರವೂ ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ, ಉಡುಪಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.

ಬೈಂದೂರು ತಾಲ್ಲೂಕಿನ ಹೆರೂರಿನಲ್ಲಿ ಸಿಡಿಲಿಗೆ ಮನೆ ಭಾಗಶಃ ಹಾನಿಯಾಗಿದೆ.ಕಾಪು, ಬೈಂದೂರು ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತ ಶುರುವಾಗಿದೆ. ಸ್ವರ್ಣಾ, ಸೀತಾ ನದಿಗಳ ಒಳಹರಿವು ಹೆಚ್ಚಿದ್ದು, ಮಳೆ ಮುಂದುವರಿದರೆ ನೆರೆಯ ಭೀತಿ ಎದುರಾಗಲಿದೆ.

ಭಾರಿ ಮಳೆ ಮುನ್ಸೂಚನೆ:ಕರಾವಳಿಯ ಮೂರು ಜಿಲ್ಲೆಗಳಲ್ಲಿ ಜೂನ್ 20 ರಿಂದ 23ರವರೆಗೆ ಯಲ್ಲೊ ಅಲರ್ಟ್‌ ಹಾಗೂ 23 ಹಾಗೂ 24 ರಂದು ಆರೆಂಜ್ ಅಲರ್ಟ್‌ ಘೋಷಿಸಲಾಗಿದ್ದು, ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜತೆಗೆ, ಸಮುದ್ರದಲ್ಲಿ ದೈತ್ಯ ಅಲೆಗಳು ಏಳಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.