ADVERTISEMENT

ಗುಂಡ್ಲುಪೇಟೆ, ಕಳಸದಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:05 IST
Last Updated 5 ಜೂನ್ 2019, 19:05 IST
ಮಳೆಯಿಂದ ಕೆರೆಯಂತಾದ ಬಸ್ ನಿಲ್ದಾಣ
ಮಳೆಯಿಂದ ಕೆರೆಯಂತಾದ ಬಸ್ ನಿಲ್ದಾಣ   

ಮೈಸೂರು: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ಪಟ್ಟಣ ಮತ್ತು ಸುತ್ತಮುತ್ತ ಜೋರು ಮಳೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಮತ್ತಷ್ಟು ಅನುಕೂಲವಾಗಿದೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬುಧವಾರ ಒಂದು ಗಂಟೆಗೂ ಹೆಚ್ಚು ಹೊತ್ತು ಮಳೆಯಾಯಿತು. ಇದರಿಂದ ಪಟ್ಟಣದ ಬಸ್ ನಿಲ್ದಾಣ, ಮಡಹಳ್ಳಿ ವೃತ್ತ, ಊಟಿ ಗೇಟ್ ಬಳಿ, ಆರ್‌ಟಿಒ ಚೆಕ್ ಪೋಸ್ಟ್ ಬಳಿ ರಸ್ತೆಯು ನೀರಿನಿಂದ ಆವೃತ್ತವಾಗಿದ್ದವು.

ಕೊಡಗಿನಲ್ಲಿ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ಗೋಣಿಕೊಪ್ಪಲು ಸುತ್ತಮುತ್ತ ಮಧ್ಯಾಹ್ನ ಜೋರು ಮಳೆಯಾಯಿತು. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲೂ ಗುಡುಗು ಸಹಿತ ಮಳೆಯಾಗಿದೆ. ಅರ್ಧ ಗಂಟೆ ಸುರಿದ ಮಳೆಯಿಂದ ಇಳೆ ತಂಪಾಯಿತು. ಕಕ್ಕಬ್ಬೆ, ಪಾರಾಣೆ, ಬಲಮುರಿ, ಹೊದ್ದೂರು ಹಾಗೂ ಸುಂಟಿಕೊಪ್ಪದ ಸುತ್ತಮುತ್ತಲೂ ಭಾರಿ ಮಳೆ ಸುರಿಯಿತು.

ADVERTISEMENT

ಹಾಸನ ಜಿಲ್ಲೆಯ ಅರಕಲಗೂಡು ಸುತ್ತಮುತ್ತ ಗುಡುಗು ಸಹಿತ ಮಳೆಯಾಯಿತು.

ಕಳಸದಲ್ಲಿ ಹದವಾದ ಮಳೆ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಹದವಾದ ಮಳೆ ಸುರಿಯಿತು.

ಬುಧವಾರ ಬೆಳಿಗ್ಗೆಯಿಂದಲೇ ಕವಿದಿದ್ದ ಮೋಡ ಸಂಜೆ 4ರ ವೇಳೆಗೆ ಕರಗಿ ಧಾರಾಕಾರವಾಗಿ ಮಳೆ ಸುರಿಯಿತು. ಗುಡುಗು ಸಿಡಿಲಿನ ಆರ್ಭಟ ಇಲ್ಲದೆ ಒಂದೇ ಸಮನೆ ಸುರಿದ ಮಳೆಯು ತೋಟ, ಗದ್ದೆಗೆ ಅಗತ್ಯವಾಗಿ ಬೇಕಾಗಿದ್ದ ತೇವಾಂಶ ತಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.