ADVERTISEMENT

ರಾಯಚೂರು ಎಪಿಎಂಸಿ ಯಾರ್ಡ್‌ಗೆ ಮಳೆನೀರು: ಕಣ್ಣೀರಿಟ್ಟ ಈರುಳ್ಳಿ ಬೆಳೆದ ರೈತರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 6:54 IST
Last Updated 25 ಸೆಪ್ಟೆಂಬರ್ 2019, 6:54 IST
ರಾಯಚೂರು ಮಾರುಕಟ್ಟೆಯಲ್ಲಿ ಈರುಳ್ಳಿ ಒಣಗಿಸಲು ಯತ್ನಿಸುತ್ತಿರುವ ರೈತರು
ರಾಯಚೂರು ಮಾರುಕಟ್ಟೆಯಲ್ಲಿ ಈರುಳ್ಳಿ ಒಣಗಿಸಲು ಯತ್ನಿಸುತ್ತಿರುವ ರೈತರು   

ರಾಯಚೂರು: ನಗರದಲ್ಲಿ ರಾತ್ರಿ ಸುರಿದ ಮಳೆಯಿಂದ ರಾಜೇಂದ್ರ ಗಂಜ್ ಎಪಿಎಂಸಿ ಯಾರ್ಡ್‌ನೊಳಗೆ ನೀರು ನುಗ್ಗಿದ್ದು, ರೈತರು ಮಾರಾಟ ಮಾಡಲು ತಂದಿದ್ದ ಈರುಳ್ಳಿ ತೊಯ್ದು ಹಾಳಾಗಿದೆ. ಬೆಳೆನಷ್ಟದಿಂದ ಕಣ್ಣೀರು ಹಾಕುತ್ತಿದ್ದಾರೆ.

ತಾಲ್ಲೂಕಿನ ಉಂಡ್ರಾಳದೊಡ್ಡಿ, ಬೀಜನಗೇರಾ, ಸಿಂಗನೋಡಿ, ಗಿಲ್ಲೇಸುಗೂರು ಹಾಗೂ ಗದ್ವಾಲ್ ತಾಲ್ಲೂಕಿನ ಗ್ರಾಮಗಳ ರೈತರು ಈರುಳ್ಳಿ ಮಾರಾಟಕ್ಕೆ ತಂದಿದ್ದರು. ಸದ್ಯ ಈರುಳ್ಳಿ ಕ್ವಿಂಟಲ್ ಗೆ ₹3,500 ದರವಿದೆ. ಆದರೆ, ತೊಯ್ದು ಈರುಳ್ಳಿಯನ್ನು ದಲ್ಲಾಳಿಗಳು ಕೇಳಿದ ದರಕ್ಕೆ ಕೊಡಬೇಕಾಗುತ್ತದೆ ಎಂದು ರೈತರು ಪರಿತಪಿಸುತ್ತಿರುವುದು ಕಂಡುಬಂತು.

ತೊಯ್ದು ನಾಶವಾದ ಈರುಳ್ಳಿ ಬೇರ್ಪಡಿಸುವ ಕೆಲಸಕ್ಕೆ ಕೂಲಿಗಳಿಗೆ ಹಣವನ್ನು ಕೊಡುವುದು ರೈತರಿಗೆ ಮತ್ತೊಂದು ಹೊರೆಯಾಗಿ ಪರಿಣಮಿಸಿದೆ.

ADVERTISEMENT
ಮಳೆಗೆ ನೆಂದು ಹಾಳಾದ ಈರುಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.