ADVERTISEMENT

ರಾಜೀವ್‌ ಗಾಂಧಿ ವಿಶ್ವವಿದ್ಯಾಲಯ ಕುಲಪತಿ ಹುದ್ದೆ: ಮೂವರ ಹೆಸರು ಅಂತಿಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 0:15 IST
Last Updated 20 ಫೆಬ್ರುವರಿ 2025, 0:15 IST
<div class="paragraphs"><p>ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ</p></div>

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ

   

ಬೆಂಗಳೂರು: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಗಾಗಿ ರಚಿಸಲಾದ ಶೋಧನಾ ಸಮಿತಿಯು ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಧ್ಯಾಪಕ ಡಾ.ಬಿ.ಸಿ. ಭಗವಾನ್‌ ಸೇರಿದಂತೆ ಮೂರು ಹೆಸರನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡಾ.ಬಿ.ಸಿ. ರವಿಕುಮಾರ್‌, ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ.ನಳಿನಿ ಅವರ ಹೆಸರು ಪಟ್ಟಿಯಲ್ಲಿವೆ. 

ADVERTISEMENT

ಈಗಿರುವ ಕುಲಪತಿ ಎಂ.ಕೆ. ರಮೇಶ್‌ ಅವರು2022ರ ಫೆಬ್ರವರಿ 11ರಂದು ಮೂರು ವರ್ಷಗಳ ಅವಧಿಗೆ ಕುಲಪತಿಯಾಗಿ ನೇಮಕವಾಗಿದ್ದರು. ಅವರ ಅವಧಿ ಇದೇ ಫೆ. 10ರಂದು ಮುಕ್ತಾಯವಾಗಿತ್ತು. ಹೊಸ ಕುಲಪತಿ ನೇಮಕ ಮಾಡುವವರೆಗೆ ಅಥವಾ ಮುಂದಿನ ಆರು ತಿಂಗಳಿಗೆ ಅವರ ಅವಧಿಯನ್ನು ವಿಸ್ತರಿಸಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಆದೇಶ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.