ADVERTISEMENT

ಆರೋಗ್ಯ ವಿವಿ: ವಿದ್ಯಾರ್ಥಿಗಳಿಗೆ ಶೇ 100ಕ್ಕಿಂತ ಹೆಚ್ಚು ಅಂಕ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 23:30 IST
Last Updated 9 ಮಾರ್ಚ್ 2024, 23:30 IST
   

ಬೆಂಗಳೂರು: ಲಿಖಿತ ಪರೀಕ್ಷೆ ಅಂಕಗಳ ಜತೆ ಪ್ರಾಯೋಗಿಕ ಪರೀಕ್ಷೆ ಅಂಕಗಳನ್ನು ಜೋಡಿಸುವಾಗ ಆದ ಪ್ರಮಾದದಿಂದ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು ಶೇ 100ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ!

ಫಲಿತಾಂಶವನ್ನು ಈಚೆಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದಾಗ ಪ್ರಮಾದವಾಗಿರುವುದು ಗಮನಕ್ಕೆ ಬಂದಿದೆ. ದೋಷಪೂರಿತ ಫಲಿತಾಂಶವನ್ನು ತಕ್ಷಣ ತಡೆ ಹಿಡಿದ ವಿಶ್ವವಿದ್ಯಾಲಯ, ಲೋಪ ಸರಿಪಡಿಸಿ, ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ.  

‘ವಿಶ್ವವಿದ್ಯಾಲಯ ಇದೇ ಮೊದಲ ಬಾರಿ ಸೆಮಿಸ್ಟರ್‌ ಪದ್ಧತಿ ಅಳವಡಿಸಿಕೊಂಡಿದೆ. ಬದಲಾದ ಹೊಸ ವ್ಯವಸ್ಥೆ ಪೌಲ್ಯಮಾಪನ ವಿಭಾಗದ ಸಿಬ್ಬಂದಿ ಹೊಂದಿಕೊಳ್ಳದೇ ಇರುವುದು ಇಂತಹ ಸಮಸ್ಯೆಗೆ ಕಾರಣ. ಪರಿಷ್ಕೃತ ಫಲಿತಾಂಶದಿಂದಾಗಿ ವಿದ್ಯಾರ್ಥಿಗಳ ನೈಜ ಅಂಕಗಳು ದೊರೆತಿವೆಯೇ ಹೊರತು, ಉತ್ತೀರ್ಣ, ಅನುತ್ತೀರ್ಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.