ADVERTISEMENT

ಬಂದ್ ಮಾಡಿದರೆ ಥಳಿತ: ರಾಮ್ ಸೇನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 21:39 IST
Last Updated 25 ನವೆಂಬರ್ 2020, 21:39 IST

ಧಾರವಾಡ: ‘ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರುದ್ಧ ಕನ್ನಡಪರ ಸಂಘಟನೆಗಳು ಹಾಗೂ ವಾಟಾಳ್‌ ನಾಗರಾಜ್‌ ಕರೆ ನೀಡಿರುವ ಬಂದ್‌ ಬೆಂಬಲಿಸಿ ಬೀದಿಗಿಳಿಯುವವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗುವುದು’ ಎಂದು ರಾಮ್‌ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಕದಂ ಹೇಳಿದರು.

‘ಕರ್ನಾಟಕದಲ್ಲೇ ಹುಟ್ಟಿ ಬೆಳೆದಿರುವ ಮರಾಠಿಗರಿಗಾಗಿ ಸರ್ಕಾರ ಪ್ರಾಧಿಕಾರ ರಚಿಸಿದರೆ ತಪ್ಪೇನು? ಮರಾಠಿಗರು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ, ಕರ್ನಾಟಕದಲ್ಲೂ ಇದ್ದಾರೆ. ಇಂಥ ಕನ್ನಡ ಪರ ಹೋರಾಟಗಾರರು ಇತರ ಭಾಷಿಗರ ಕುರಿತು ಏಕೆ ಮೌನ ವಹಿಸಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಹಿಂದೂ ಸಂಘಟನೆಗೆ ಶಿವಾಜಿ ಸೇರಿದಂತೆ ಇತರರ ಕೊಡುಗೆ ದೊಡ್ಡದಿದೆ. ಒಂದೊಮ್ಮೆ ನಮ್ಮ ಎಚ್ಚರಿಕೆಯನ್ನೂ ಕಡೆಗಣಿಸಿ ಬೀದಿಗಿಳಿದರೆ ನಾವೂ ಬೆಂಗಳೂರು ಚಲೋಗೆ ಕರೆ ನೀಡುತ್ತೇವೆ, ವಾಟಾಳ್‌ ನಾಗರಾಜ್ ಮನೆಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.