ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ

ಹುಬ್ಬಳ್ಳಿಯಲ್ಲಿ ನಡೆದ ಜನಾಗ್ರಹ ಸಭೆ: ಖಾಸಗಿ ಮಸೂದೆ ಮಂಡನೆಗೆ ಸಂಸದ ಜೋಶಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2018, 19:18 IST
Last Updated 25 ನವೆಂಬರ್ 2018, 19:18 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ರಾಮ ಮಂದಿರ ನಿರ್ಮಾಣ ಜನಾಗ್ರಹ ಸಭೆಯಲ್ಲಿ ಜೈನಮುನಿ ಡಾ. ಹೇಮಚಂದ್ರ ಸುರೀಶ್ವರಜಿ ಮಾತನಾಡಿದರು. ಮನಗುಂಡಿಯ ಶ್ರೀಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ಜಬಲ್‌ಪುರದ ಮಹಾಮಂಡಳೇಶ್ವರ ಅಖಿಲೇಶ್ವನಂದಗಿರಿ ಸ್ವಾಮೀಜಿ, ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಸಿದ್ಧಾಶ್ರಮದ ಸಿದ್ಧ ಶಿವಯೋಗಿ ಸ್ವಾಮೀಜಿ ಇದ್ದಾರೆ– ಪ್ರಜಾವಾಣಿ ಚಿತ್ರ

ಹುಬ್ಬಳ್ಳಿ/ಗದಗ:ಹುಬ್ಬಳ್ಳಿ ಹಾಗೂ ಗದುಗಿನಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷತ್ ಜನಾಗ್ರಹ ಸಭೆಯಲ್ಲಿ, ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣದ ಸಂಕಲ್ಪ ಮಾಡಲಾಯಿತು.ಮಂದಿರ ನಿರ್ಮಾಣದ ಕಾನೂನನ್ನು ಜಾರಿ ಮಾಡಿದರೆ, ಎಲ್ಲ ಪಕ್ಷಗಳು ಅದಕ್ಕೆ ಬೆಂಬಲ ನೀಡುವ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಯನ್ನು ಗೌರವಿಸಬೇಕು ಎಂದೂ ಆಗ್ರಹಿಸಲಾಯಿತು.

ಮನವಿ ಸ್ವೀಕರಿಸಿದ ಸಂಸದ ಪ್ರಹ್ಲಾದ ಜೋಶಿ, ರಾಮ ಮಂದಿರ ನಿರ್ಮಾಣಕ್ಕೆ ಖಾಸಗಿ ಮಸೂದೆ ಮಂಡಿಸುವುದಾಗಿ ಹೇಳಿದರು.

ಮನಗುಂಡಿಯ ಶ್ರೀಗುರು ಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ಜಬಲ್‌ಪುರದ ಮಹಾಮಂಡಳೇಶ್ವರ ಅಖಿಲೇಶ್ವನಂದ ಗಿರಿ ಸ್ವಾಮೀಜಿ, ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.