ADVERTISEMENT

ಶಿವರುದ್ರ ಸ್ವಾಮೀಜಿಗೆ ‘ರಮಣಶ್ರೀ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 15:10 IST
Last Updated 10 ನವೆಂಬರ್ 2022, 15:10 IST
ಶಿವರುದ್ರ ಸ್ವಾಮೀಜಿ
ಶಿವರುದ್ರ ಸ್ವಾಮೀಜಿ   

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2022ನೇ ಸಾಲಿನ ‘ರಮಣಶ್ರೀ ಶರಣ ಪ್ರಶಸ್ತಿ’ ಘೋಷಣೆಯಾಗಿದ್ದು, ‘ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿ’ಗೆ ಬೇಲಿಮಠದ ಶಿವರುದ್ರ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ₹ 50 ಸಾವಿರ ನಗದು ಒಳಗೊಂಡಿದೆ. ಶರಣ ಸಾಹಿತ್ಯ ಸಂಶೋಧನೆಗೆ ಹುಬ್ಬಳ್ಳಿಯ ಬಿ.ವಿ. ಶಿರೂರ, ಆಧುನಿಕ ವಚನ ರಚನೆಗೆ ವಿಜಯಪುರದ ಫ.ಗು. ಸಿದ್ದಾಪುರ, ವಚನ ಸಂಗೀತಕ್ಕೆ ಬೆಂಗಳೂರಿನ ಮೃತ್ಯುಂಜಯ ದೊಡ್ಡವಾಡ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ಬಾಗಲಕೋಟೆಯ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠವು ‘ರಮಣಶ್ರೀ ಶರಣ ಪ್ರಶಸ್ತಿ’ಗೆ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ₹ 40 ಸಾವಿರ ನಗದು ಒಳಗೊಂಡಿದೆ.

ಶರಣ ಸಾಹಿತ್ಯ ಸಂಶೋಧನೆಗೆ ಶಿವಬಸವನಗರದ ಕಾರಂಜಿ ಮಠದ ಶಿವಯೋಗಿ ದೇವರು, ವಚನ ರಚನೆಗೆ ಶಿವಮೊಗ್ಗದ ದಾಕ್ಷಾಯಿಣಿ ಜಯದೇವಪ್ಪ, ವಚನ ಸಂಗೀತಕ್ಕೆ ಬೆಂಗಳೂರಿನ ಸಿದ್ದರಾಮ ಕೇಸಾಪುರ ಹಾಗೂ ಶರಣ ಸಂಸ್ಕೃತಿ ಪ್ರಸಾರಕ್ಕೆ ನಂಜನಗೂಡಿನ ವಿಶ್ವಬಸವ ಸೇನೆಯ ಬಸವ ಯೋಗೇಶ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹ 20 ಸಾವಿರ ನಗದು ಒಳಗೊಂಡಿದೆ.

ADVERTISEMENT

ಇದೇ 17ರಂದು ಬೆಂಗಳೂರಿನ ರಿಚ್ಮಂಡ್‌ ವೃತ್ತದಲ್ಲಿರುವ ರಮಣಶ್ರೀ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ವಿ. ಸೋಮಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ವೀರೇಂದ್ರ ಷಡಕ್ಷರಿ ಹಾಗೂ ಅರುಣಾ ಸತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.