ADVERTISEMENT

‘ಗತವೈಭವ ನೆನಪಿಸುವ ಕೃತಿ’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 15:52 IST
Last Updated 7 ಏಪ್ರಿಲ್ 2021, 15:52 IST
ಜೀರಿಗೆ ಲೋಕೇಶ್‌ (ಮಧ್ಯ) ಪುಸ್ತಕ ಬಿಡುಗಡೆಗೊಳಿಸಿದರು. ಲೇಖಕ ರಮಾನಂದ ಹಾಗೂ ಗುರುರಾಜ ಪೋಶೆಟ್ಟಿಹಳ್ಳಿ ಇದ್ದಾರೆ.
ಜೀರಿಗೆ ಲೋಕೇಶ್‌ (ಮಧ್ಯ) ಪುಸ್ತಕ ಬಿಡುಗಡೆಗೊಳಿಸಿದರು. ಲೇಖಕ ರಮಾನಂದ ಹಾಗೂ ಗುರುರಾಜ ಪೋಶೆಟ್ಟಿಹಳ್ಳಿ ಇದ್ದಾರೆ.   

ಬೆಂಗಳೂರು: ‘ಹಿರಿಯ ಸಂಶೋಧಕ ಮತ್ತು ಕಾದಂಬರಿಕಾರ ಕೆ.ರಮಾನಂದ ಅವರು ರಚಿಸಿರುವ ಚಾರಿತ್ರಿಕ ವ್ಯಕ್ತಿಚಿತ್ರ ಶ್ರೀಕೃಷ್ಣದೇವರಾಯ ಕೃತಿಯು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವಂತಿದೆ’ ಎಂದು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್‌ ಹೇಳಿದರು.

ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ವಿಜಯನಗರ ಸಾಮ್ರಾಜ್ಯದ ಕೀರ್ತಿಶಿಖರವಾಗಿದ್ದ ಶ್ರೀಕೃಷ್ಣದೇವರಾಯನ ಕುರಿತು ಆಳವಾದ ಅಧ್ಯಯನ ನಡೆಸಿ ಈ ಕೃತಿ ರಚಿಸಲಾಗಿದೆ. ಶ್ರೀಕೃಷ್ಣದೇವರಾಯ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳ ಕುರಿತು ಇದರಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

ADVERTISEMENT

ಸಂಸ್ಕೃತಿ ಚಿಂತಕ ಗುರುರಾಜ ಪೋಶೆಟ್ಟಿಹಳ್ಳಿ ‘ರಮಾನಂದ ಅವರು ಐತಿಹಾಸಿಕ ರಾಜಮನೆತನದ ನಾಯಕನೊಬ್ಬನ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ. ಇದು ಅವರ ಗದ್ಯ ಬರವಣಿಗೆಯ ನಿಪುಣತೆಗೆ ಹಿಡಿದ ಕೈಗನ್ನಡಿ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.