ADVERTISEMENT

ಮಾಧ್ಯಮಗಳ ಕತ್ತು ಹಿಸುಕುವ ಕೆಲಸ: ರಮೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
ರಮೇಶ್  ಕುಮಾರ್‌
ರಮೇಶ್  ಕುಮಾರ್‌   

ಬಾಗಲಕೋಟೆ: ‘ವಿಧಾನಮಂಡಲದ ಕಲಾಪದ ವೇಳೆ ಮಾಧ್ಯಮಗಳನ್ನು ಹೊರ ಗಿಟ್ಟಿದ್ದು ದುರಾದೃಷ್ಟಕರ. ಮಾಧ್ಯಮಗಳ ಕತ್ತು ಹಿಸುಕುವ ಕೆಲಸ ನಡೆಯುತ್ತಿದೆ. ಈಗ ಕಾಶ್ಮೀರ ದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ವಿಚಾರದಲ್ಲಿ ಏನಾಗುತ್ತಿದೆ? ಅದರ ಪ್ರತಿಬಿಂಬವೇ ಕರ್ನಾಟಕ ವಿಧಾನಸಭೆ’ ಎಂದು ಶಾಸಕ ಕೆ.ಆರ್. ರಮೇಶ ಕುಮಾರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರೇಮ ವ್ಯವಹಾರ ಖಾಸಗಿಯಾಗಿ ಮಾಡಬೇಕು. ಆದರೆ ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಒಳಗೆ ಗುಟ್ಟಾಗಿ ಮಾಡಬಾರದು ಎಂದು ಚಕ್ರವರ್ತಿ ನೆಪೋಲಿಯನ್ ಹೇಳಿದ್ದರು. ಆದರೆ ಈಗ ಅಧಿವೇಶನಕ್ಕೆ ಕ್ಯಾಮೆರಾ ತರಬಾರದು ಅನ್ನೋದು ದುಃಖಕರ ಸಂಗತಿ’ ಎಂದರು.

‘ಹಿಂದಿನ ಸರ್ಕಾರದಲ್ಲಿ ಸ್ಪೀಕರ್ ಆಗಿ ನನ್ನ ಕರ್ತವ್ಯವನ್ನು ಸಂವಿಧಾನ ಪ್ರಕಾರವೇ ಮಾಡಿದ್ದೇನೆ. ಅದರಿಂದ ಯಾರಿಗೆ ಅರ್ಹತೆ ಇಲ್ಲವೇ ಅನರ್ಹತೆ ಬಂದಿದೆಯೋ ನನಗೆ ಗೊತ್ತಿಲ್ಲ. ನಮ್ಮ ದೇಶದಲ್ಲಿ ಗಾಂಧೀಜಿ ಅವರನ್ನೇ ಕೊಂದಿದ್ದೇವೆ. ಇನ್ನು
ಈ ರಮೇಶಕುಮಾರ್ ಯಾವ ದೊಡ್ಡ ಮನುಷ್ಯ? ಅವ್ರಿಗೇ ಬಿಟ್ಟಿಲ್ಲ, ಇನ್ನು ನನಗೆ ಬಿಡ್ತಾರಾ’ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.