ADVERTISEMENT

ತಪ್ಪಾಗಿದ್ದರೆ ನೇಣು ಹಾಕಿಕೊಳ್ಳಲು ಸಿದ್ಧ: ವಿ.ಸೋಮಣ್ಣ

ಕೆಲವು ಪಿಡಿಒಗಳದ್ದು ರಾಕ್ಷಸ ಪ್ರವೃತ್ತಿ ಎಂಬ ಹೇಳಿಕೆಗೆ ಬದ್ಧ– ಸಚಿವ ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 19:33 IST
Last Updated 13 ಸೆಪ್ಟೆಂಬರ್ 2020, 19:33 IST
ವಿ. ಸೋಮಣ್ಣ
ವಿ. ಸೋಮಣ್ಣ   

ಬೆಂಗಳೂರು:‘ಸಣ್ಣತನದಿಂದ ನಡೆದುಕೊಂಡು, ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನಾನು ನೇಣು ಹಾಕಿಕೊಳ್ಳಲು ತಯಾರಿದ್ದೇನೆ’ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಭಾನುವಾರ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಡಿಒಗಳು ಅನ್ಯಾಯ ಮಾಡಬಾರದು. ಬಡವರಿಗೆ ಕೊಡುವ ಮನೆಗಳಲ್ಲಿ ಆನ್ಯಾಯವಾದರೆ ಹೇಗೆ ಸಹಿಸುವುದು ಎಂದು ಪ್ರಶ್ನಿಸಿದರು.

‘ಎಲ್ಲ ಶಾಸಕರಿಗೂ ಪತ್ರ ಬರೆದು ಪ್ರಧಾನಮಂತ್ರಿ ವಸತಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇವೆ. ಕೋಲಾರದಲ್ಲಿ 180 ಅನರ್ಹ ಫಲಾನುಭವಿಗಳು, ಬೀದರ್‌ನಲ್ಲಿ 96 ಕೋಟಿಯಷ್ಟು ಹಣ ದುರ್ಬಳಕೆ ತಡೆದಿದ್ದೇನೆ. ಹಾಸನ ಜಿಲ್ಲೆಗೂ ಭೇಟಿ ನೀಡಿದ್ದು, ಅಲ್ಲಿ ಎಚ್.ಡಿ.ರೇವಣ್ಣ ಅವರು ಅನರ್ಹರಿಗೆ ಮನೆ ಕೊಡಲಾಗುತ್ತಿದೆ ಎಂದರು. ಆಗ ಕೆಲ ಪಿಡಿಒಗಳು ರಾಕ್ಷಸ ಪ್ರವೃತ್ತಿಯವರಿದ್ದಾರೆ ಎಂದಿದ್ದು ನಿಜ. ಪ್ರಾಮಾಣಿಕರಿಗೆ ಬೇಸರ ಆಗಿದ್ದರೆ ವಿಷಾದಿಸುತ್ತೇನೆ’ ಎಂದರು.

ADVERTISEMENT

‘ಇದನ್ನು ಸಿ.ಎಂ ಗಮನಕ್ಕೂ ತಂದಿದ್ದೇನೆ. ಅವರು ಇದರಲ್ಲಿ ತಪ್ಪೇನಿದೆ ಎಂದಿದ್ದಾರೆ. ಪಿಡಿಒಗಳು ಪ್ರತಿಭಟನೆಗೆ ಮುಂದಾಗುತ್ತಿ
ದ್ದಾರೆ. ಅವರು ಪ್ರತಿಭಟನೆ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.