ADVERTISEMENT

ಬಡ್ತಿ ಮೀಸಲಾತಿ: ಹೋರಾಟಗಾರ ಪವಿತ್ರಗೆ ಕೊನೆಗೂ ಅಧಿಕಾರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:58 IST
Last Updated 18 ಸೆಪ್ಟೆಂಬರ್ 2019, 19:58 IST

ಬೆಂಗಳೂರು: ಬಡ್ತಿ ಮೀಸಲಾತಿ ವಿರೋಧಿಸಿ ಕಾನೂನು ಹೋರಾಟ ನಡೆಸಿದ್ದ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಕೆ.ಪವಿತ್ರ ಅವರಿಗೆ ಕೊನೆಗೂ ಸ್ಥಳ ನಿಯೋಜನೆ ಮಾಡಲಾಗಿದ್ದು, ಬೆಂಗಳೂರಿನ ರಸ್ತೆ ಹಾಗೂ ಆಸ್ತಿಗಳ ನಿರ್ವಹಣೆ ಕೇಂದ್ರದ ಮುಖ್ಯ ಎಂಜಿನಿಯರ್ ಹುದ್ದೆಗೆ ನಿಯೋಜಿಸಲಾಗಿದೆ.

ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ರೇವಣ್ಣ ಅವರಿಗೆ ಆಪ್ತರಾಗಿದ್ದ ಎಂ.ಗಣೇಶ್ ಅವರನ್ನು ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್ ಹುದ್ದೆ
ಯಿಂದ ಕರ್ನಾಟಕ ಆರೋಗ್ಯ ಪದ್ಧತಿಗಳ ಇಲಾಖೆ ಮುಖ್ಯ ಎಂಜಿನಿಯರ್ ಹುದ್ದೆಗೆ ವರ್ಗಾಯಿಸಲಾಗಿದೆ.

ಮುಖ್ಯ ಎಂಜಿನಿಯರ್ (ಸ್ವತಂತ್ರ ಪ್ರಭಾರ) ಹುದ್ದೆಗೆ ವರ್ಗಾವಣೆಗೊಂಡವರು: ಬಿ.ಸೋಮಸುಂದರ್, ಹೇಮಾವತಿ ಯೋಜನಾ ವಲಯ, ಗೊರೂರು; ಡಿ.ಮಂಜುನಾಥ್, ಕೃಷ್ಣಾ ಭಾಗ್ಯ ಜಲನಿಗಮ, ನಾರಾಯಣಪುರ; ಶಂಕರಗೌಡ ಎಫ್.ಪಾಟೀಲ, ಕೃಷ್ಣಾ ಭಾಗ್ಯ ಜಲ ನಿಗಮ, ರಾಂಪುರ; ಬಿ.ಕೆ.ಸುರೇಶ್ ಬಾಬು, ಕೆ–ಶಿಪ್, ಬೆಂಗಳೂರು; ಪ್ರದೀಪ್ ಮಿತ್ರ ಮಂಜುನಾಥ್, ಕೃಷ್ಣಾ ಭಾಗ್ಯ ಜಲ ನಿಗಮ, ಭೀಮರಾಯನಗುಡಿ; ಬಿ.ಟಿ.ಕಾಂತರಾಜು, ಅಂತರ್ಜಲ ನಿರ್ದೇಶನಾಲಯ, ಬೆಂಗಳೂರು; ಸಣ್ಣಚಿತ್ತಯ್ಯ, ರಾಜೀವ್ ಗಾಂಧಿ ವಸತಿ ನಿಗಮ, ಬೆಂಗಳೂರು. ವಿ.ಗೋವಿಂದರಾಜು, ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು; ಎನ್.ರಾಮಕೃಷ್ಣ, ಕರ್ನಾಟಕ ನಿರ್ಮಾಣ ನಿಗಮ, ಬೆಂಗಳೂರು; ಶಿವಯೋಗಿ ಹಿರೇಮಠ್, ಸ್ಮಾರ್ಟ್ ಸಿಟಿ, ಬೆಂಗಳೂರು; ವಿ.ಸಂಜೀವರೆಡ್ಡಿ, ರಾಜ್ಯ ರಸ್ತೆ ಅಭಿವೃದ್ಧಿ ಯೋಜನೆ, ಬೆಂಗಳೂರು; ಮಹೇಶ್, ಲೋಕಾಯುಕ್ತ, ಬೆಂಗಳೂರು; ಕೆ.ಮೋಹನ್, ನೀರಾವರಿ ನಿಗಮ, ಕಲಬುರ್ಗಿ; ಬಿ.ಎನ್.ಫಣಿರಾಜು, ಕಾಡಾ, ಕಲಬುರ್ಗಿ; ಬಿ.ಕೆ.ರಾಜೇಂದ್ರ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು; ಶಂಕರೇಗೌಡ, ಕಾವೇರಿ ನೀರಾವರಿ ನಿಗಮ, ಮೈಸೂರು.

ADVERTISEMENT

ಮುಖ್ಯ ಎಂಜಿನಿಯರ್: ಬಿ.ಜಿ.ರಾಮಚಂದ್ರಯ್ಯ, ಅಂತರರಾಜ್ಯ ಜಲವಿವಾದ ಕೋಶ, ಬೆಂಗಳೂರು; ಎಚ್.ಆರ್.ರಾಮಕೃಷ್ಣ, ಗುಣ ಭರವಸೆ ವಲಯ, ಲೋಕೋಪಯೋಗಿ ಇಲಾಖೆ, ಬೆಂಗಳೂರು; ಎಚ್.ಎನ್.ಶ್ರೀನಿವಾಸ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.