ADVERTISEMENT

ಮೀಸಲಾತಿ ದುರುಪಯೋಗ ಸಲ್ಲದು: ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 9:08 IST
Last Updated 7 ಮಾರ್ಚ್ 2020, 9:08 IST
   

ದಾವಣಗೆರೆ: ವೀರಶೈವ ಜಂಗಮ ಲಿಂಗಾಯತರು ಶ್ರೇಷ್ಠ ಕುಲದವರು, ಗುರುಗಳಂತೆ ಮಾನ್ಯತೆ ಮಾಡುತ್ತೇವೆ ಅವರನ್ನು ಗೌರವಿಸುತ್ತೇವೆ. ಅವರ ಪಾದಪೂಜೆ ಮಾಡಿ ಗೌರವಿಸುತ್ತೇವೆ. ಅವರು ಯಾವ ಕಾರಣಕ್ಕೂ ಬೇಡ ಜಂಗಮರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯಬಾರದು ಎಂದುಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದರು.

ಮಾಧ್ಯಮದವರ ಜೊತೆ ಮಾತನಾಡಿದ ಅವರು ಪ್ರಧಾನಿ ನರೇಂದ್ರಮೋದಿಯವರು ಕೇಂದ್ರದಲ್ಲಿ ಶೇ 10 ರಷ್ಟು ಮೀಸಲಾತಿ ನಿಗದಿಪಡಿಸಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮುದಾಯಗಳಾದಬ್ರಾಹ್ಮಣರು, ವೀರಶೈವ ಲಿಂಗಾಯತರು, ವೈಶ್ಯರು ಇದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಪೊಲೀಸರಿಗೆ ಸಂಬಳವಿಲ್ಲ ವಿಷಯ ಕುರಿತು ಮಾತನಾಡಿದ ಅವರು,ಸಂಬಳ ಕೊಡದ ಪರಿಸ್ಥಿತಿ ಏನು ಸರ್ಕಾರಕ್ಕೆ ಇಲ್ಲ. ಸಾರಿಗೆ ಸಂಬಳಕ್ಕೆ ತೊಂದರೆ ಇಲ್ಲ ಆರ್ಥಿಕವಾಗಿ ಹೊರೆ ಜಾಸ್ತಿಯಾಗಿದೆ. ಪ್ರವಾಹ ಬಂದಾಗ ₹35 ಸಾವಿರ ಕೋಟಿಯಷ್ಟು ಹಾನಿಯಾಗಿದೆ.ಹಿಂದಿನ ಸರ್ಕಾರ ಸಾಲ ಮನ್ನಾ ಮಾಡಿದ 45 ಸಾವಿರ ಕೋಟಿಯಷ್ಟು ಹಣ ಮುಂದುವರೆದ ಹೊರೆ ನಮ್ಮ ಮೇಲೆ ಬಂದಿದ್ದರಿಂದ ಆರ್ಥಿಕ ಹೊರೆ ಇದೆ ಎಂದರು.

ADVERTISEMENT

ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಪ್ರಶ್ನೆಗೆ ಹಿಂದಿನ ಸರ್ಕಾರವೇ ನಾಗಮೋಹನ್ ದಾಸ್ ಆಯೋಗ ನೇಮಿಸಿದ್ದು, ನಾಗಮೋಹನ್ ದಾಸ್ ಅವರು 6 ತಿಂಗಳು ಸಮಯಾವಕಾಶ ಕೇಳಿದ್ದಾರೆ. ವರದಿ ಬಂದ ನಂತರ ಸಚಿವ ಸಂಪುಟದ ಮುಂದೆ ಇಟ್ಟು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.