ADVERTISEMENT

ನಿವೃತ್ತ ಡಿಜಿ– ಐಜಿಪಿ ಇ–ಮೇಲ್ ಹ್ಯಾಕ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 4:48 IST
Last Updated 1 ಮಾರ್ಚ್ 2021, 4:48 IST

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ– ಐಜಿಪಿ) ಸೇವೆ ಸಲ್ಲಿಸಿ ನಿವೃತ್ತರಾದ ಶಂಕರ್ ಬಿದರಿ ಅವರ ಇ–ಮೇಲ್ ಹ್ಯಾಕ್ ಮಾಡಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹ್ಯಾಕ್ ಬಗ್ಗೆ ಶಂಕರ್ ಬಿದರಿ ಅವರೇ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

’ಇ–ಮೇಲ್ ಹ್ಯಾಕ್ ಮಾಡಿರುವ ವಂಚಕರು, ನನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ. ತುರ್ತಾಗಿ ಹಣ ನೀಡುವಂತೆ ಸ್ನೇಹಿತರನ್ನು ಕೋರಿ ಐಎಫ್‌ಎಸ್‌ಸಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಖಾತೆ ಸಂಖ್ಯೆಗಳನ್ನು ನೀಡಿದ್ದಾರೆ’ ಎಂದು ಶಂಕರ್ ಬಿದರಿ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಸಂದೇಶ ನಂಬಿದ್ದ ಸ್ನೇಹಿತರೊಬ್ಬರು, ಆರೋಪಿಗಳು ನೀಡಿದ್ದ ಖಾತೆಗೆ ₹ 25 ಸಾವಿರ ಜಮೆ ಮಾಡಿ ವಂಚನೆಗೀಡಾಗಿದ್ದಾರೆ. ಇ–ಮೇಲ್ ಹ್ಯಾಕ್ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ, ಕಾನುನು ಕ್ರಮ ಕೈಗೊಳ್ಳಿ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.