ADVERTISEMENT

ಕರ್ನಾಟಕದಲ್ಲಿ ‘ರೋಹಿತ್‌ ವೇಮುಲ ಕಾಯ್ದೆ’ ಶೀಘ್ರ ಜಾರಿ: ರಾಹುಲ್‌ಗೆ ಸಿಎಂ ಭರವಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 16:18 IST
Last Updated 18 ಏಪ್ರಿಲ್ 2025, 16:18 IST
<div class="paragraphs"><p>ಕರ್ನಾಟಕದಲ್ಲಿ ‘ರೋಹಿತ್‌ ವೇಮುಲ ಕಾಯ್ದೆ’ ಶೀಘ್ರ ಜಾರಿ: ರಾಹುಲ್‌ಗೆ ಸಿಎಂ ಭರವಸೆ</p></div>

ಕರ್ನಾಟಕದಲ್ಲಿ ‘ರೋಹಿತ್‌ ವೇಮುಲ ಕಾಯ್ದೆ’ ಶೀಘ್ರ ಜಾರಿ: ರಾಹುಲ್‌ಗೆ ಸಿಎಂ ಭರವಸೆ

   

ಬೆಂಗಳೂರು: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಾತ್ರಿಪಡಿಸುವುದಕ್ಕಾಗಿ ‘ರೋಹಿತ್‌ ವೇಮುಲ ಕಾಯ್ದೆ’ ಹೆಸರಿನ ಕಾನೂನನ್ನು ಕರ್ನಾಟಕದಲ್ಲೂ ರೂಪಿಸುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

ಅಲ್ಲದೇ ಅವರು ಏಪ್ರಿಲ್ 16 ರಂದು ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದರು.

ADVERTISEMENT

ಇದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ವಿದ್ಯಾರ್ಥಿ ತಾರತಮ್ಯ ಎದುರಿಸಬಾರದು ಎನ್ನುವುದನ್ನು ಖಾತ್ರಿ ಪಡಿಸಲು ಕಾಯ್ದೆ ಜಾರಿಗೊಳಿಸುವ ಸಂಕಲ್ಪಕ್ಕೆ ಸರ್ಕಾರ ಬದ್ಧ ಮತ್ತು ದೃಢ ಎಂದು ಹೇಳಿದ್ದಾರೆ.

ರೋಹಿತ್, ಪಾಯಲ್, ದರ್ಶನ್‌ ಮತ್ತು ಘನತೆಗೆ ಅರ್ಹರಾದ ಅಸಂಖ್ಯಾತರ ಕನಸುಗಳನ್ನು ಗೌರವಿಸಲು ಕಾನೂನನ್ನು ಆದಷ್ಟು ಶೀಘ್ರ ಸಿದ್ಧಪಡಿಸಲಾಗುವುದು. ಬಿ.ಆರ್. ಅಂಬೇಡ್ಕರ್‌ ಅವರ ಸಮಾನ, ಸಹಾನುಭೂತಿಯ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ದಿಟ್ಟ ಹೆಜ್ಜೆ ಇಡಲಾಗುವುದು. ಆದಷ್ಟು ಬೇಗ ಈ ಕಾನೂನನ್ನು ಜಾರಿಗೆ ತರಲಾಗುವುದು ಎಂದಿದ್ದಾರೆ.

ಬಿ.ಆರ್‌. ಅಂಬೇಡ್ಕರ್‌ ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ್ದ ತಾರತಮ್ಯಕ್ಕೆ ಸಂಬಂಧಿಸಿದ ಹಲವು ಘಟನೆಗಳನ್ನು ರಾಹುಲ್ ಗಾಂಧಿ ಪತ್ರದಲ್ಲಿ ವಿವರಿಸಿದ್ದು, ಈ ಪತ್ರವನ್ನು ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.