ADVERTISEMENT

ಖನಿಜ ನಿಗಮಕ್ಕೆ ₹ 196 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:34 IST
Last Updated 21 ಜನವರಿ 2021, 18:34 IST
ರಾಜ್ಯ ಖನಿಜ ನಿಗಮವು ಸರ್ಕಾರಕ್ಕೆ ₹29.75 ಕೋಟಿಯ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡಲಾಯಿತು. ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ, ಸಚಿವ ಸಿ.ಸಿ.ಪಾಟೀಲ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಿ.ಕುಮಾರ್‌ನಾಯಕ್‌ ಇದ್ದಾರೆ.

ಹೊಸದುರ್ಗ: ರಾಜ್ಯ ಖನಿಜ ನಿಗಮವು 2019–20ನೇ ಸಾಲಿನಲ್ಲಿ ₹ 357 ಕೋಟಿ ವಹಿವಾಟು ನಡೆಸಿದ್ದು, ₹ 196 ಕೋಟಿ ಲಾಭ ಗಳಿಸಿದೆ ಎಂದು ಖನಿಜ ನಿಗಮದ ಅಧ್ಯಕ್ಷ ಎಸ್‌.ಲಿಂಗಮೂರ್ತಿ ತಿಳಿಸಿದ್ದಾರೆ.

‘ಕಂಪನಿಯ ಷೇರುದಾರರಿಗೆ ಶೇ 50ರಷ್ಟು ಲಾಭಾಂಶವನ್ನು ಹಂಚಿಕೆ ಮಾಡಲು ಈಚೆಗೆ ನಡೆದ54ನೇ ವಾರ್ಷಿಕ ಸಭೆಯಲ್ಲಿ ಅನುಮೋದಿಸಿದೆ. ಷೇರುಗಳ ಅನ್ವಯ ಸರ್ಕಾರಕ್ಕೆ ನೀಡಬೇಕಾದ ₹ 29.75 ಕೋಟಿ ಚೆಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡಲಾಯಿತು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಪರಿಹಾರ ನಿಧಿಗೂ ನಿಗಮದಿಂದ ₹ 15 ಕೋಟಿ ದೇಣಿಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.