ADVERTISEMENT

ವೈರಸ್‌ ಚಿತ್ರದ ಮಾದರಿಯ ಈ ಕಾಯಿ ಕಟ್ಟಿದರೆ ಕೊರೊನಾ ಬರಲ್ಲ! ವದಂತಿ ನಂಬಿದ ಜನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 11:51 IST
Last Updated 5 ಏಪ್ರಿಲ್ 2020, 11:51 IST
   
""

ಕಾನಹೊಸಹಳ್ಳಿ:ಕೊರೊನಾವೈರಸ್‌ ಸೋಂಕು ಹಿನ್ನೆಲೆಯಲ್ಲಿ ಗ್ರಾಮಿಣ ಭಾಗದ ಜನರು ವದಂತಿಗೆ ಕಿವಿಗೊಟ್ಟು ಮನೆಯ ಬಾಗಿಲಿಗೆ ಉಮ್ಮತ್ತಿ (ಹುಚ್ಚು ಎಲೆ) ಕಾಯಿ ಕಟ್ಟಿದ್ದಾರೆ.

ಹೋಬಳಿಯದ್ಯಾಂತ ಹಬ್ಬಿರುವ ಸುಳ್ಳು ವದ್ದಂತಿಯಿಂದಾಗಿ ಗ್ರಾಮಿಣ ಭಾಗದ ಜನತೆ ಈ ಗಿಡವನ್ನು ಕೊರೊನಾ ಗಿಡವೆಂದು ನಂಬಿತಮ್ಮ ಮನೆಯ ಬಾಗಿಲುಗಳಿಗೆ ಕಟ್ಟಿದ್ದಾರೆ.

ಹೋಬಳಿ ವ್ಯಾಪ್ತಿಯ ನಿಂಬಳಗೆರೆ, ಗಾಣಗಟ್ಟೆ, ಐಯ್ಯನಹಳ್ಳಿ, ಬಯಲು ತುಂಬರಗುದ್ದಿ,ಕಾನಹೊಸಹಳ್ಳಿ ಸೇರಿದಂತೆ ಇನ್ನು ಹಲವು ಹಳ್ಳಿಯ ಜನರು ಮನೆಯ ಭಾಗಿಲಿಗೆ ತೊರಣಗಳಂತೆ ಹುಚ್ಚು ಎಲೆಯ ಕಾಯಿಗಳನ್ನು ಕಟ್ಟಿದ್ದಾರೆ.

ADVERTISEMENT

ಇನ್ನು ಉಮ್ಮತ್ತಿ ಕಾಯಿ ಕೊರೊನಾ ವೈರಸ್‌ ಚಿತ್ರದ ಮಾದರಿಯಲ್ಲಿದ್ದು, ಆ ಕಾಯಿಯನ್ನು ಮನೆಯ ಬಾಗಿಲಿಗೆ ಕಟ್ಟಿದ್ದಾರೆ ಕೊರೊನಾ ರೋಗ ನಮ್ಮ ಬಳಿ ಸುಳಿಯುವುದಿಲ್ಲ ಎಂಬುದಾಗಿಕಿಡಿಗೇಡಿಗಳು ಹಬ್ಬಿಸಿರುವ ಗಾಳಿ ಸುದ್ದಿಗೆ ಜನತೆ ಮಾರು ಹೊಗ್ಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.