ADVERTISEMENT

ಕಾಂಗ್ರೆಸ್‌ನಿಂದ ಲೋಕಭವನ ಮುತ್ತಿಗೆ ಎಷ್ಟು ಸಮಂಜಸ: ಸುರೇಶ್ ಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:53 IST
Last Updated 26 ಜನವರಿ 2026, 15:53 IST
<div class="paragraphs"><p>ಸುರೇಶ್ ಕುಮಾರ್</p></div>

ಸುರೇಶ್ ಕುಮಾರ್

   

ಬೆಂಗಳೂರು:‘ವಿಧಾನಸಭಾಧ್ಯಕ್ಷರು ನಾಳೆ (ಮಂಗಳವಾರ) ಬೆಳಿಗ್ಗೆ ವಿಧಾನಸಭೆ ಅಧಿವೇಶನ ಕರೆದಿದ್ದಾರೆ. ಆದರೆ, ಆಡಳಿತ ಪಕ್ಷ ಕಾಂಗ್ರೆಸ್‌ ಅದೇ ಸಮಯಕ್ಕೆ ಸರಿಯಾಗಿ ಲೋಕಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದು ಎಷ್ಟರ ಮಟ್ಟಿಗೆ ಸಮಂಜಸ’ ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್ ಅವರು ಪ್ರಶ್ನಿಸಿದ್ದಾರೆ.

ಒಂದು ಕಡೆ ಸಭಾಧ್ಯಕ್ಷರು ರಾಜ್ಯಪಾಲರ ಭಾಷಣದ ಮೇಲೆ ‘ಗೊಂದಲ’ (ವಂದನಾ) ನಿರ್ಣಯದ ಕುರಿತ ಚರ್ಚೆಯನ್ನು ಕಲಾಪದ ಅಜೆಂಡಾದಲ್ಲಿ ಸೇರಿಸಿದ್ದಾರೆ. ಚರ್ಚೆಯನ್ನು ಆಲಿಸಲು ಆಡಳಿತ ಪಕ್ಷದ ಯಾರೂ ಇರುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ ಪಕ್ಷಕ್ಕೆ ಅವರು ಕೆಲ ಪ್ರಶ್ನೆಗಳು ಕೇಳಿದ್ದಾರೆ–

  • ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಆಡಳಿತ ಪಕ್ಷ ಲೋಕಭವನಕ್ಕೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡು ತನ್ನ ಶಾಸಕರು ಅದರಲ್ಲಿ ಭಾಗವಹಿಸುತ್ತಾರೆ ಎಂದು ಪ್ರಕಟಣೆ ಹೊರಡಿಸಿರುವುದು ಎಷ್ಟು ಸಮಂಜಸ?

  • ಬೆಂಗಳೂರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವ ಕಾರ್ಯಕ್ರಮವನ್ನು ಹೈಕೋರ್ಟ್‌ ನಿರ್ದೇಶನದಂತೆ ನಿಷೇಧಿಸಲಾಗಿದೆ. ಒಂದು ವೇಳೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ ಬೇರೆ ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆಯೇ?

  • ಆಡಳಿತ ನಡೆಸುತ್ತಿರುವ ಪಕ್ಷವೇ ಕಾನೂನನ್ನು ಉಲ್ಲಂಘಿಸುವುದು ಎಷ್ಟು ಸಮಂಜಸ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.