ADVERTISEMENT

ಬಡವರು, ಶ್ರಮಿಕರಿಗೆ ಮಿಡಿದ ಪ್ರಧಾನಿ: ಎಸ್‌.ಟಿ. ಸೋಮಶೇಖರ್‌

ಸಹಕಾರ ಸಚಿವ

​ಪ್ರಜಾವಾಣಿ ವಾರ್ತೆ
Published 13 ಮೇ 2020, 21:00 IST
Last Updated 13 ಮೇ 2020, 21:00 IST
ಸಚಿವ ಎಸ್‌.ಟಿ ಸೋಮಶೇಖರ್‌
ಸಚಿವ ಎಸ್‌.ಟಿ ಸೋಮಶೇಖರ್‌    

ಬೆಂಗಳೂರು:ಕೊರೊನಾ ವಿರುದ್ಧ ಕಾರ್ಯನಿರ್ವಹಿಸಿದ ವಾರಿಯರ್ಸ್‌ಗಳಿಗೆ ₹50 ಲಕ್ಷ ವಿಮೆ ಮತ್ತು ದೇಶದ 80 ಕೋಟಿ ಬಡ ಜನರಿಗೆ 3 ತಿಂಗಳು ಅಕ್ಕಿ ಮತ್ತು ಗೋಧಿ ವಿತರಿಸುವ ಮೂಲಕ ಹಸಿವು ನಿವಾರಿಸುವ ಮಹಾನ್‌‌ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಜನ್‌ಧನ್‌ ಖಾತೆ ಹೊಂದಿರುವ ಮಹಿಳೆಯರಿಗೆ ಮುಂದಿನ ಮೂರು ತಿಂಗಳು ₹500 ಸಹಾಯ ಧನ, 8 ಕೋಟಿ ಬಡ ಕುಟುಂಬಗಳಿಗೆ 3 ತಿಂಗಳು ಉಚಿತ ಅಡುಗೆ ಅನಿಲ ಸಿಲಿಂಡರ್‌, 13.62 ಕೋಟಿ ಕುಟುಂಬಗಳಿಗೆ ನರೇಗಾ ಸೌಲಭ್ಯ ಸೇರಿದಂತೆ 3 ಕೋಟಿ ಬಡ ಹಿರಿಯ ನಾಗರಿಕರು, ಅಂಗವಿಕಲರು, 8.7 ಕೋಟಿ ರೈತರು ಧನ ಸಹಾಯ ಪಡೆಯಲಿದ್ದಾರೆ. ದೇಶದ ತಳಮಟ್ಟ ಜನರನ್ನು ಸ್ಪಂದಿಸುವ ಕೆಲಸ ಮೋದಿ ಮಾಡಿರುವುದು ಶ್ಲಾಘನೀಯ ಎಂದು ಅವರು ತಿಳಿಸಿದ್ದಾರೆ.

ಆತ್ಮವಿಶ್ವಾಸ ವೃದ್ಧಿಸಿದ ಕ್ರಮ, ಕಾರಜೋಳ: ಉದ್ಯಮಿಗಳು ಮತ್ತು ಶ್ರಮಿಕ ವರ್ಗದ ಜತೆ ತಾವಿದ್ದೇವೆ ಎಂದು ದೇಶದ ಜನರ ಆತ್ಮ ವಿಶ್ವಾಸವನ್ನು ತುಂಬುವುದರ ಜತೆಗೆ ಸ್ವಾಭಿಮಾನದ ನವ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ADVERTISEMENT

ಕೋವಿಡ್‌–19 ಸಂಕಷ್ಟದ ಮಧ್ಯೆಯೇ ದೇಶವನ್ನು ಮೇಲೆತ್ತುವುದರ ಜತೆಗೆ ಜನರ ಆತ್ಮ ಸ್ಥೈರ್ಯವನ್ನೂ ಎತ್ತರಿಸುವ ಕೆಲಸ ಆಗಿದೆ. ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೆರವಿನ ಅಗತ್ಯವಿತ್ತು. ₹3 ಲಕ್ಷ ಕೋಟಿಯನ್ನು ಪ್ರಕಟಿಸುವ ಮೂಲಕ ಅಭೂತಪೂರ್ವ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ವಿಸ್ತರಿಸಲು ₹50 ಸಾವಿರ ಕೋಟಿ ನೆರವು ನೀಡುವುದರಿಂದ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಕಾರಜೋಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.