ADVERTISEMENT

ಕಾವೇರಿ ನೀರಿನ ಸಮಸ್ಯೆ ಪರಿಹಾರಕ್ಕೆ ಸದ್ಗುರು ಜಗ್ಗಿ ವಾಸುದೇವ ಸಲಹೆ

ಹೋರಾಟಗಳಿಂದ ಪ್ರಯೋಜನ ಇಲ್ಲ ಎಂದ ಸದ್ಗುರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2023, 10:55 IST
Last Updated 30 ಸೆಪ್ಟೆಂಬರ್ 2023, 10:55 IST
ಸದ್ಗುರು ಜಗ್ಗಿ ವಾಸುದೇವ್‌
ಸದ್ಗುರು ಜಗ್ಗಿ ವಾಸುದೇವ್‌   

ಬೆಂಗಳೂರು: ಕಾವೇರಿ ನೀರಿನ ಸಮಸ್ಯೆ ಬಗೆಹರಿಯಬೇಕೆಂದರೆ ಕಾವೇರಿ ನದಿ ಕೊಳ್ಳದಲ್ಲಿ ವ್ಯಾಪಕ ಗಿಡ–ಮರಗಳನ್ನು ಬೆಳೆಯಬೇಕು ಎಂದು ಇಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ ಅವರು ಕರೆ ನೀಡಿದ್ದಾರೆ.

ಈ ಕುರಿತು X ತಾಣದಲ್ಲಿ ಬರೆದುಕೊಂಡಿರುವ ಅವರು, ‘ತಾಯಿ ಕಾವೇರಿಗೆ ನಾವು ಯಾವ ರಾಜ್ಯದವರೆಂದು ಗೊತ್ತಿಲ್ಲ. ಬೇಸಿಗೆಯಲ್ಲಿ ಹರಿಯುವುದನ್ನು ನಿಲ್ಲಿಸಿ ಬತ್ತಿ ಹೋಗುವುವಳು. ಕಾವೇರಿ ಕೊಳ್ಳದ ಸುಮಾರು 83,000 ಚಕಿಮೀ ವ್ಯಾಪ್ತಿಯ ಭೂಮಿಯಲ್ಲಿ ಮರ–ಗಿಡಗಳನ್ನು ಬೆಳೆಸುತ್ತಾ ಕೃಷಿ ಮಾಡುವುದೇ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ. ಇದರಿಂದ ಮಾತ್ರ ಕಾವೇರಿ ವರ್ಷಪೂರ್ತಿ ತುಂಬಿ ಹರಿಯುವಳು’ ಎಂದು ಸಲಹೆ ನೀಡಿದ್ದಾರೆ.

‘ಪ್ರಸ್ತುತ ಕಾವೇರಿ ನೀರಿನ ಜ್ವಲಂತ ಸಮಸ್ಯೆಗೆ ಇದುವೇ ಪರಿಹಾರವಾಗಬಹುದು. ಬದಲಿಗೆ ಹೋರಾಟಗಳಿಂದ ಪ್ರಯೋಜನ ಇಲ್ಲ’ ಎಂದು ಹೇಳಿದ್ದಾರೆ.

ADVERTISEMENT

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಸೆ.29 ರಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದ್ದವು. ಇಂದು ಕೂಡ ಅಲ್ಲಲ್ಲಿ ಹೋರಾಟಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.