
ಪ್ರಜಾವಾಣಿ ವಾರ್ತೆ
ಬೆಂಗಳೂರು: ನಗರದ ಪಂಡಿತ್ ಆರ್.ವಿ.ಶೇಷಾದ್ರಿ ಗವಾಯಿ ಪುಣ್ಯಸ್ಮೃತಿ ಸಮಿತಿ ಹಾಗೂ ನಾದವಾಹಿನಿ ಶ್ರೀ ದತ್ತ ಸಂಗೀತ ವಿದ್ಯಾನಿಕೇತನ ಸಂಸ್ಥೆಯು ತಬಲಾ ವಾದಕ ಸತೀಶ್ ಹಂಪಿಹೊಳಿ ಹಾಗೂ ಗಾಯಕ ಗೋಪಾಲ್ ರಾಯಚೂರ್ ಅವರನ್ನು ಸಂಗೀತ ಶಿರೋಮಣಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಅ.25ರ ಮಧ್ಯಾಹ್ನ 3ಕ್ಕೆ ಚಾಮರಾಜ ಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆಯುವ ಸಂಸ್ಥೆಯ 40ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಬೇಲಿಮಠದ ಶಿವರುದ್ರ ಸ್ವಾಮೀಜಿ, ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್, ಗಾಯಕ ವಿ.ಎಂ.ನಾಗರಾಜ್ ಅವರು ಪಾಲ್ಗೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.