ADVERTISEMENT

ಸಂಕಲ್ಪ ಉತ್ಸವ 9ರಂದು

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:14 IST
Last Updated 4 ಜನವರಿ 2021, 19:14 IST
ಸಂಕಲ್ಪ ಉತ್ಸವ ಪತ್ರಿಕೆ ಬಿಡುಗಡೆ
ಸಂಕಲ್ಪ ಉತ್ಸವ ಪತ್ರಿಕೆ ಬಿಡುಗಡೆ   

ಯಲ್ಲಾಪುರ (ಉತ್ತರ ಕನ್ನಡ): ಸಂಕಲ್ಪ ಸೇವಾ ಸಂಸ್ಥೆಯ 34ನೇ ‘ಸಂಕಲ್ಪ ಉತ್ಸವ’ವನ್ನು ಜನವರಿ 9 ರಂದು ಪಟ್ಟಣದ ‘ನಿಸರ್ಗ ಮನೆ’ಯಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಉತ್ಸವ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಪ್ರಸಿದ್ಧ ಕಲಾವಿದರಾದ ಕೇಶವ ಹೆಗಡೆ ಕೊಳಗಿ, ಶಂಕರ ಭಟ್ಟ ಬ್ರಹ್ಮೂರು, ರಾಘವೇಂದ್ರ ಆಚಾರ್ಯ ಜನಸಾಲೆ ಇವರ ಗಾಯನ ಕಾರ್ಯಕ್ರಮ 9 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಸುನೀಲ ಭಂಡಾರಿ, ಶಂಕರ ಭಾಗ್ವತ್, ಗಣಪತಿ ಭಾಗ್ವತ ಕವಾಳೆ, ಪ್ರಸನ್ನ ಹೆಗ್ಗಾರ, ಗಣೇಶ ಗಾಂವ್ಕರ್ ಇವರ ವಾದನದಲ್ಲಿ ‘ಹಿಮ್ಮೇಳ ಗಾನ ವೈಭವ' ನಡೆಯಲಿದೆ. ಶ್ರೀರಕ್ಷಾ ಹಾಗೂ ಚಿಂತನಾ ಇವರ ಭಾಗವತಿಕೆ ನಡೆಯಲಿದೆ.

ಸಂಜೆ 6 ಗಂಟೆಯಿಂದ ಸುಬ್ರಹ್ಮಣ್ಯ ಚಿಟ್ಟಾಣಿ, ನೀಲಕೋಡ ಶಂಕರ ಹೆಗಡೆ ತಂಡದವರಿಂದ 'ಭಾಸವತಿ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ADVERTISEMENT

ಕೋವಿಡ್ ಕಾರಣದಿಂದ 7 ದಿನಗಳ ಸಂಕಲ್ಪ ಉತ್ಸವವನ್ನು ಈ ಬಾರಿ ಕೈ ಬಿಡಲಾಗಿದ್ದು, ವರ್ಷದುದ್ದಕ್ಕೂ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ 7 ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.