ADVERTISEMENT

ಧರ್ಮಸ್ಥಳ ಪಿತೂರಿಯ ಹಿಂದೆ ನಾನಿಲ್ಲ: ಸೆಂಥಿಲ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 16:06 IST
Last Updated 21 ಆಗಸ್ಟ್ 2025, 16:06 IST
ಸಸಿಕಾಂತ್‌ ಸೆಂಥಿಲ್‌
ಸಸಿಕಾಂತ್‌ ಸೆಂಥಿಲ್‌   

ನವದೆಹಲಿ: ಧರ್ಮಸ್ಥಳಕ್ಕೆ ಕಳಂಕ ತರುವ ಪಿತೂರಿಯ ಹಿಂದೆ ತಮ್ಮ ಕೈವಾಡವಿದೆ ಎಂಬ ಆರೋಪವನ್ನು ಆಧಾರರಹಿತ ಎಂದು ಸಂಸದ ಸಸಿಕಾಂತ ಸೆಂಥಿಲ್‌ ಸ್ಪಷ್ಟಪಡಿಸಿದರು. 

ಕರ್ನಾಟಕ ಕೇಡರ್‌ ಮಾಜಿ ಐಎಎಸ್‌ ಅಧಿಕಾರಿಯಾಗಿರುವ ಅವರು, ʼಸುಳ್ಳು ಆರೋಪಗಳನ್ನು ಹೊರಿಸುವುದನ್ನು ಮುಂದುವರಿಸಿದರೆ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆʼ ಎಂದು ಎಚ್ಚರಿಸಿದರು. 

ʼಧರ್ಮಸ್ಥಳದಲ್ಲಿನ ಬೆಳವಣಿಗೆಗಳ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ನಾನು ವರ್ಷಗಳ ಹಿಂದೆಯೇ ಕರ್ನಾಟಕ ತೊರೆದಿದ್ದೇನೆ. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಎಳೆದು ತರುವುದು ಮಾನನಷ್ಟದ ಕೃತ್ಯ. ಪ್ರಚಾರ ಪಡೆಯುವುದಕ್ಕಾಗಿ ರೆಡ್ಡಿ ಈ ಆರೋಪ ಮಾಡಿರಬಹುದುʼ ಎಂದು ಅವರು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.