ADVERTISEMENT

ಮಂಗಳೂರು ಸ್ಫೋಟ ಪ್ರಕರಣ: ಸ್ಯಾಟಲೈಟ್ ಫೋನ್‌ಗಾಗಿ ಕಾಡಿನಲ್ಲಿ ಶೋಧ

ಕುಕ್ಕರ್‌ ಬಾಂಬ್‌ ಸ್ಫೋಟಕ್ಕೆ ನಂಟು ಇರುವ ಅನುಮಾನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 1:42 IST
Last Updated 27 ನವೆಂಬರ್ 2022, 1:42 IST
ಸೆಟಲೈಟ್‌ ಫೋನ್‌ ಬಳಸಿ ಸಂವಹನ ನಡೆಸಿದ ಕುರುಹುಗಳ ಪತ್ತೆಗಾಗಿ ಪೊಲೀಸ್‌ ಸಿಬ್ಬಂದಿ ಬೆಂದ್ರಾಳ ಕಾಡಿನಲ್ಲಿ ಶನಿವಾರ ಹುಡುಕಾಟ ನಡೆಸಿದರು
ಸೆಟಲೈಟ್‌ ಫೋನ್‌ ಬಳಸಿ ಸಂವಹನ ನಡೆಸಿದ ಕುರುಹುಗಳ ಪತ್ತೆಗಾಗಿ ಪೊಲೀಸ್‌ ಸಿಬ್ಬಂದಿ ಬೆಂದ್ರಾಳ ಕಾಡಿನಲ್ಲಿ ಶನಿವಾರ ಹುಡುಕಾಟ ನಡೆಸಿದರು   

ಉಜಿರೆ (ದಕ್ಷಿಣ ಕನ್ನಡ): ಬೆಳ್ತಂಗಡಿ ತಾಲ್ಲೂಕಿನ ಬೆಂದ್ರಾಳ ಪ್ರದೇಶದಲ್ಲಿ ಇದೇ 18ರಂದು ಸಂಜೆ 5 ಗಂಟೆಗೆ ನಿಷೇಧಿತ ಸ್ಯಾಟಲೈಟ್ ಫೋನ್‌ ಬಳಸಿ ಸಂವಹನ ನಡೆದಿದೆ ಎನ್ನಲಾಗಿದ್ದು, ಇದರ ಕುರಿತು ಹೆಚ್ಚಿನ ಕುರುಹುಗಳ ಪತ್ತೆಗಾಗಿ ಆಂತರಿಕ ಭದ್ರತಾ ಇಲಾಖೆ ಮತ್ತು ಸ್ಥಳೀಯ ಪೊಲೀಸ್‌ ಸಿಬ್ಬಂದಿ ಕಾಡಿನಲ್ಲಿ ಶೋಧ ನಡೆಸಿದ್ದಾರೆ.

ಸಂವಹನಕ್ಕೆ ಸ್ಯಾಟಲೈಟ್ ಫೋನ್‌ ಬಳಿಸಿದ ಸ್ಥಳವು ಬೆಂದ್ರಾಳದ ಕಾಡಿನಲ್ಲಿದೆ ಎಂದು ಆಂತರಿಕಭದ್ರತಾ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಆಂತರಿಕ ಭದ್ರತಾ ಇಲಾಖೆಯ ಎಸ್‌.ಐ ಚಿದಾನಂದ್‌ ನೇತೃತ್ವದ ತಂಡವು ಬೆಂದ್ರಾಳ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT