ADVERTISEMENT

ಜ್ಯೇಷ್ಠತೆ, ಬಡ್ತಿಯಲ್ಲಿ ಅನ್ಯಾಯ: ಕಾರಜೋಳಗೆ ಅಹವಾಲು

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ಅಧಿಕಾರಿ, ನೌಕರರ ಸಂಘದಿಂದ ಸಚಿವರ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 20:19 IST
Last Updated 3 ಜುಲೈ 2022, 20:19 IST
   

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿ, ನೌಕರರಿಗೆ ಜ್ಯೇಷ್ಠತೆ, ಬಡ್ತಿಯಲ್ಲಿ ಅನ್ಯಾಯವಾಗುತ್ತಿದ್ದು, ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ಅಧಿಕಾರಿ, ನೌಕರರ ಸಂಘ ಅಹವಾಲು ಸಲ್ಲಿಸಿದೆ.

‘ಇಲಾಖೆಯ ಕಾರ್ಯದರ್ಶಿ ಕೃಷ್ಣಾ ರೆಡ್ಡಿಯವರು ಎಲ್ಲ ವೃಂದಗಳಲ್ಲಿ ಈ ವರ್ಗದವರಿಗೆ ಬಡ್ತಿ ತಪ್ಪಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ’ ಎಂದು ಆರೋಪಿಸಿದಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ, ‘ನಮ್ಮ ‌ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ದ್ದಾರೆ’ ಎಂದರು.

‘ಬಿ.ಕೆ.ಪವಿತ್ರ ತೀರ್ಪು–2 ಬಂದ ಬಳಿಕ ಜ್ಯೇಷ್ಠತೆ ಪರಿಷ್ಕರಿಸಿ, ಅರ್ಹತೆ ಇಲ್ಲದ ಸಾಮಾನ್ಯ ವರ್ಗದವರಿಗೆ ಹಿಂಬಡ್ತಿ ನೀಡಿಲ್ಲ. ಅಧೀಕ್ಷಕ ಎಂಜಿನಿ ಯರ್‌ ಹುದ್ದೆಯಿಂದ ಮುಖ್ಯ ಎಂಜಿ ನಿಯರ್‌ ಹುದ್ದೆಗೆ ಮುಂಬಡ್ತಿ ಹೊಂದು ವವರೆಲ್ಲ ಜ್ಯೇಷ್ಠತೆಯಲ್ಲಿ ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ಇದೇ 27ರಂದು ನಡೆಯಬೇಕಿದ್ದ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆ ಮುಂದೂಡುವಂತೆ ಮಾಡಲಾಗಿದೆ. ಅಧೀಕ್ಷಕ ಎಂಜಿನಿಯರ್‌ ಹುದ್ದೆಯಲ್ಲಿ ಕೇವಲ 11 ಹುದ್ದೆಗಳು ಖಾಲಿ ಇದ್ದರೂ ಸಾಮಾನ್ಯ ವರ್ಗದ31 ಜನರಿಗೆ ಡಿಪಿಸಿ ಸಭೆ ನಡೆಸಿ ಸ್ಥಳ ನಿಯುಕ್ತಿಗೊಳಿಸಿದರೆ, ಪರಿಶಿಷ್ಟ ಜಾತಿಯ 20 ಅಧೀಕ್ಷಕ ಎಂಜಿನಿಯರ್‌ಗಳು ಹಾಲಿ ಕಾರ್ಯನಿರ್ವಹಣೆಯಿಂದ ಸ್ಥಳ ನಿರೀಕ್ಷಣೆಯ ಸಂಭವ ಉಂಟಾಗಲಿದೆ ಎಂದು ಮನ ವಿಯಲ್ಲಿ ಪ್ರಸ್ತಾಪಿಸಿದ್ದೇವೆ’ ಎಂದರು.

ADVERTISEMENT

‘ಬ್ಯಾಕ್‌ಲಾಗ್‌ ಎಂಜಿನಿಯರ್‌ಗಳಿಗೆ 2004ರಿಂದ ಜ್ಯೇಷ್ಠತೆ ನಿಗದಿಪಡಿಸದೆ 700ಕ್ಕೂ ಹೆಚ್ಚು ಜನರು ಸಾಮಾನ್ಯ ವರ್ಗದವರೇ ಜೇಷ್ಠತೆಯಲ್ಲಿ ಹಿರಿತನಕ್ಕೆ ಬರುವಂತೆ ಮಾಡಲಾಗಿದೆ. ಸಹಾಯಕ ಅಭಿಯಂತರರು ವಿಭಾಗ-2 ಹುದ್ದೆಗೆ ಮುಂಬಡ್ತಿ ನೀಡಲು ಲೋಕೋ ಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಪ್ಪಿಗೆ ನೀಡಿ ದ್ದರೂ ಕ್ರಮ ವಹಿಸದಿರುವ ಬಗ್ಗೆಯೂ ಉಲ್ಲೇಖಿಸಿದ್ದೇವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.