ADVERTISEMENT

ಐಎಂಎ ಸಂಸ್ಥೆ ದತ್ತು ಪಡೆದಿದ್ದ ವಿಕೆಓ ಶಾಲೆ ವಕ್ಫ್‌ ಮಂಡಳಿಗೆ

ಹಣಕಾಸು ಹಗರಣ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:41 IST
Last Updated 22 ಜೂನ್ 2019, 19:41 IST
   

ಬೆಂಗಳೂರು: ಹಣಕಾಸು ಹಗರಣದಲ್ಲಿ ಸಿಲುಕಿಕೊಂಡಿರುವ ಐಎಂಎ ಸಂಸ್ಥೆ ದತ್ತು ಪಡೆದಿದ್ದಶಿವಾಜಿನಗರದ ವಿಕೆಓ ಸರ್ಕಾರಿ ಶಾಲೆಯ ಆಡಳಿತವನ್ನು ಅಲ್ಪಸಂಖ್ಯಾತ ಇಲಾಖೆಗೆ ಒಳಪಟ್ಟ ವಕ್ಫ್‌ ಮಂಡಳಿ ವಹಿಸಿಕೊಂಡಿದೆ.

ಹಗರಣ ಬೆಳಕಿಗೆ ಬಂದ ಬಳಿಕ ಒಂದು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯಲ್ಲಿ ಆತಂಕ ನೆಲೆಸಿತ್ತು. ಪೋಷಕರು ತಮ್ಮ ಮಕ್ಕಳನ್ನು ಬೇರೆಡೆಗೆ ಸೇರಿಸುವ ಚಿಂತನೆಯಲ್ಲಿದ್ದರು.

‘ಇನ್ನು ಮುಂದೆ ವಕ್ಫ್‌ ಮಂಡಳಿ ಶಾಲೆಯನ್ನು ಮುನ್ನಡೆಸಲು ಹಣಕಾಸು ವ್ಯವಸ್ಥೆ ಮಾಡಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಶಾಲೆಯನ್ನು ದತ್ತು ತೆಗೆದುಕೊಳ್ಳುವ ಯೋಜನೆಯಂತೆ ಐಎಂಎ ಸಂಸ್ಥೆ ಈ ಶಾಲೆಗಾಗಿ ₹ 12 ಕೋಟಿ ವ್ಯಯಿಸಿತ್ತು. ಖಾಸಗಿ ಶಿಕ್ಷಕರನ್ನು ನಿಯೋಜಿಸಿ ಪೂರ್ವ ಪ್ರಾಥಮಿಕ ವಿಭಾಗ ಆರಂಭಿಸಿತ್ತು. ಇದರಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಿತ್ತು. 2016ರಲ್ಲಿ ಐದುವರ್ಷಗಳ ಅವಧಿಗೆ ಐಎಂಎ ಸಂಸ್ಥೆ ಶಾಲೆಯನ್ನು ದತ್ತು ತೆಗೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.