ಉಡುಪಿ: ಹಿರಿಯ ಭಾಷಾ ವಿಜ್ಞಾನಿ ಹಾಗೂ ತುಳು ನಿಘಂಟು ತಜ್ಞರಾದ ಡಾ.ಯು.ಪಿ. ಉಪಾಧ್ಯಾಯ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.
ಕಾಪುವಿನವರಾದ ಉಪಾಧ್ಯಾಯ ಅವರು, ತುಳು ಭಾಷಾ ಬೃಹತ್ ನಿಘಂಟು ರಚಿಸುವಲ್ಲಿ ಹಾಗೂ ತುಳು ಭಾಷಾ ಅಧ್ಯಯನಕ್ಕೆ ಬಹಳ ಶ್ರಮಿಸಿದ್ದರು.
ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ಸಂಶೋಧನಾ ಕೃತಿಗಳನ್ನು ಬರೆದಿದ್ದಾರೆ. ಡಾ.ಯು.ಪಿ. ಉಪಾಧ್ಯಾಯರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.