ADVERTISEMENT

ಅಧಿವೇಶನ | ವಿಧಾನ ಪರಿಷತ್, ವಿಧಾನಸಭೆ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 22:03 IST
Last Updated 12 ಡಿಸೆಂಬರ್ 2025, 22:03 IST
<div class="paragraphs"><p>ಅಧಿವೇಶನ (ಸಾಂದರ್ಭಿಕ ಚಿತ್ರ)</p></div>

ಅಧಿವೇಶನ (ಸಾಂದರ್ಭಿಕ ಚಿತ್ರ)

   

ಬೆಳಗಾವಿಯ ಸುವರ್ಣ ವಿಧಾನಸೌಧನದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತರಗಳ ವಿವರ ಇಲ್ಲಿದೆ.

ವಿಧಾನಪರಿಷತ್‌

ಕನ್ನಡ ಫಲಕಕ್ಕೆ ಕಣ್ಗಾವಲು ವಾಹನ

ADVERTISEMENT

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಕಣ್ಗಾವಲು ವಾಹನ ನಿಯೋಜಿಸಲಾಗುವುದು. ಕನ್ನಡದಲ್ಲಿ ನಾಮಫಲಕ ಅಳವಡಿಸದ ಸಂಘ–ಸಂಸ್ಥೆಗಳ ವಿರುದ್ಧ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯ ಅನ್ವಯ ₹5,000ರಿಂದ ₹10,000 ದಂಡ ವಿಧಿಸಲಾಗುವುದು. ಎರಡು ಅವಕಾಶಗಳ ನಂತರವೂ ಅಳವಡಿಸಿಕೊಳ್ಳದಿದ್ದರೆ ಪ್ರತಿ ತಪಾಸಣೆಯ ವೇಳೆ ₹20,000 ದಂಡ ವಸೂಲಿ ಮಾಡಲಾಗುವುದು. ಈ ಕುರಿತು ಎಲ್ಲ ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ (ಪ್ರಶ್ನೆ: ಕಾಂಗ್ರೆಸ್‌ನ ಉಮಾಶ್ರೀ)

ಗ್ರಂಥಾಲಯ ಮೇಲ್ವಿಚಾರಕರ ಖಾತೆಗೆ ಹಣ

ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಮೇಲ್ವಿಚಾರಕರಿಗೆ ಪ್ರತಿ ತಿಂಗಳು ನೇರ ನಗದು ಪಾವತಿ ವ್ಯವಸ್ಥೆಯ ಮೂಲಕ ಗೌರವಧನ ಪಾವತಿಸಲಾಗುವುದು. ಪ್ರತಿ ಗ್ರಂಥಪಾಲಕರಿಗೆ ₹16,382 ನಿಗದಿ ಮಾಡಿದೆ. ಸರ್ಕಾರ ನೇರವಾಗಿ ₹12,000 ನೀಡುತ್ತಿದ್ದು, ಉಳಿದ ಮೊತ್ತವನ್ನು ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರಹವಾಗುವ ಗ್ರಂಥಾಲಯ ಕರದಲ್ಲಿ ಭರಿಸಲು ಸೂಚಿಸಲಾಗಿದೆ. ಪ್ರತಿ ತಿಂಗಳು ಹಣ ಜಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು

ಗ್ರಾಮೀಣಾಭಿವದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ (ಪ್ರಶ್ನೆ: ಬಿಜೆಪಿಯ ಡಿ.ಎಸ್‌.ಅರುಣ್‌)

ವಿಧಾನಸಭೆ

ಗ್ರಾಮಗಳನ್ನು ಕೈಬಿಡುವುದು ಕಷ್ಟದ ಕೆಲಸ

ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆಗಳನ್ನಾಗಿ ಉನ್ನತೀಕರಿಸುವ ವೇಳೆ ಹತ್ತಿರ ಇರುವ ಗ್ರಾಮಾಂತರ ಪ್ರದೇಶಗಳನ್ನೂ ಸೇರಿಸಿ ಗಡಿ ನಿಗದಿಪಡಿಸಲಾಗುತ್ತಿದೆ. ಆದರೆ, ಕೆಲವು ಶಾಸಕರು ನಗರಸಭೆ ವ್ಯಾಪ್ತಿಯಿಂದ ಗ್ರಾಮಗಳನ್ನು ಕೈಬಿಡುವಂತೆ ಮನವಿ ಮಾಡುತ್ತಿದ್ದಾರೆ. ಇದು ಕಷ್ಟದ ಕೆಲಸ

–ಬೈರತಿ ಸುರೇಶ್, ನಗರಾಭಿವೃದ್ಧಿ ಸಚಿವ (ಪ್ರಶ್ನೆ ಬಿಜೆಪಿಯ ದಿನಕರ ಶೆಟ್ಟಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.