ಬೆಂಗಳೂರು: ‘ನಟ ಕಮಲಹಾಸನ್ ಅವರು ಸಿನಿಮಾ ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
‘ಕರ್ನಾಟಕ- ತಮಿಳುನಾಡಿನ ನಡುವೆ ನೀರು ಮತ್ತು ಭಾಷೆಯ ವಿಚಾರದಲ್ಲಿ ಬೆಂಕಿ ಹಚ್ಚಲು ತುಂಬ ಜನರು ಪ್ರಯತ್ನಿಸುತ್ತಾರೆ. ಆದರೆ, ನಾವು ಒಟ್ಟಾಗಿ ಬದುಕಬೇಕಾದ, ಒಟ್ಟಾಗಿ ಇರಬೇಕಾದ ಅಗತ್ಯ ಇದೆ. ಕಮಲಹಾಸನ್ ಅವರು ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ, ಅವರಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ದಕ್ಷಿಣ ಭಾರತದ ತಮಿಳು, ಕನ್ನಡ, ತುಳು ಮೊದಲಾದ ಭಾಷೆಗಳು ಒಟ್ಟಿಗೇ ಬೆಳೆದಿವೆ ಎಂದು ಭಾಷಾ ತಜ್ಞರು ಹೇಳಿದ್ದಾರೆ. ಇದಕ್ಕೆ ಆ ಭಾಷೆ ಮೊದಲು, ಈ ಭಾಷೆ ನಂತರ ಎಂಬುದಿಲ್ಲ. ಇವೆಲ್ಲವೂ ಅವಳಿ ಮಕ್ಕಳಂತೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.