ADVERTISEMENT

ಅಂಗನವಾಡಿ ಮಕ್ಕಳಿಗೆ ‘ಚಹರೆ ಪತ್ತೆ’ ಹಾಜರಾತಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 16:20 IST
Last Updated 5 ಜನವರಿ 2020, 16:20 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಚಿತ್ರದುರ್ಗ: ಅಂಗನವಾಡಿ ಮಕ್ಕಳ ಹಾಜರಾತಿಯನ್ನು ಖಚಿತಪಡಿಸಿಕೊಳ್ಳಲು ಚಹರೆ ಪತ್ತೆ (ಫೇಸ್‌ ರೀಡಿಂಗ್‌) ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಂಗನವಾಡಿಗೆ ಪೂರೈಕೆಯಾಗುವ ಪಡಿತರ ಹಾಗೂ ಅನುದಾನ ಸೋರಿಕೆಯಾಗುತ್ತಿದೆ. 20 ಮಕ್ಕಳು ಹಾಜರಾಗಿದ್ದರೆ 50 ಮಕ್ಕಳು ಬಂದಿದ್ದರು ಎಂಬ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಬಯೋ ಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಚಿಕ್ಕ ಮಕ್ಕಳಿಗೆ ಅನ್ವಯವಾಗುತ್ತಿಲ್ಲ’ ಎಂದರು.

‘ಅಂಗನವಾಡಿಗಳನ್ನು ಹೈಟೆಕ್‌ ರೀತಿಯಲ್ಲಿ ರೂಪಿಸುವ ಉದ್ದೇಶದಿಂದ ಮಕ್ಕಳಿಗೆ ಡಿಜಿಟಲ್‌ ಪುಸ್ತಕ ಖರೀದಿಸಲು ತೀರ್ಮಾನಿಸಲಾಗಿದೆ. ‘ಪೋಷಣ್‌ ಅಭಿಯಾನ’ ಅಭಿಯಾನ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರತಿ ಅಂಗನವಾಡಿ ಕೇಂದ್ರಕ್ಕೆ ಸ್ಮಾರ್ಟ್‌ ಫೋನ್‌ ನೀಡಲಾಗುತ್ತಿದೆ. ಇಲಾಖೆ ರೂಪಿಸಿದ ಆ್ಯಪ್‌ನಲ್ಲಿ ನಿತ್ಯ ಮಾಹಿತಿ ಪಡೆಯಲಾಗುತ್ತದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.