ADVERTISEMENT

ದೇಶದಲ್ಲಿ ‘ಹೋಪ್’ಗಾಗಿ ಯುವತಿಯ ಓಟ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 17:11 IST
Last Updated 27 ಜೂನ್ 2019, 17:11 IST
ಸೂಫಿಯಾ
ಸೂಫಿಯಾ   

ಬೆಳಗಾವಿ: ಹೋಪ್ (ಮಾನವೀಯತೆ, ಏಕತೆ, ಶಾಂತಿ ಹಾಗೂ ಸಮಾನತೆ) ನೆಲೆಗೊಳ್ಳಬೇಕು ಎಂಬ ಆಶಯದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಗೆ ಓಡುತ್ತಲೇ ಕ್ರಮಿಸುತ್ತಿರುವ ನವದೆಹಲಿಯ ಮ್ಯಾರಾಥಾನ್ ಓಟಗಾರ್ತಿ 33 ವರ್ಷದ ಸೂಫಿಯಾ ಸುಫೀ ಗುರುವಾರ ಸಂಜೆ ನಗರ ತಲುಪಿದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಅವರು, ಬೆಳಿಗ್ಗೆ ಓಟ ಮುಂದುವರಿಸಲಿದ್ದಾರೆ. 100 ದಿನಗಳಲ್ಲಿ 4ಸಾವಿರ ಕಿ.ಮೀ. ಕ್ರಮಿಸುವುದು ಅವರ ಗುರಿಯಾಗಿದೆ. ‘ಮಾನವೀಯತೆ, ಏಕತೆ, ಶಾಂತಿ ಹಾಗೂ ಸಮಾನತೆಯ ಸಂದೇಶ ಸಾರುವುದಕ್ಕಾಗಿ ವಿಭಿನ್ನ ಪ್ರಯತ್ನವನ್ನು ಮಾಡುತ್ತಿದ್ದೇನೆ. ಏ. 25ರಂದು ಆರಂಭಿಸಿ, ಈಗಾಗಲೇ ಸಾವಿರಾರು ಹಳ್ಳಿಗಳು, 25 ಪ್ರಮುಖ ನಗರಗಳು ಹಾಗೂ 11 ರಾಜ್ಯಗಳನ್ನು ದಾಟಿದ್ದೇನೆ’ ಎಂದು ತಿಳಿಸಿದರು.

‘ಸಮಾಜವನ್ನು ಹಾಳು ಮಾಡುವ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಹಾಗೂ ಶಾಂತಿಯ ಸಂದೇಶ ಸಾರುವುದಕ್ಕಾಗಿ ಓಟದ ಮಾಧ್ಯಮವನ್ನು ಆಯ್ದುಕೊಂಡಿದ್ದೇನೆ’ ಎಂದು ಹೇಳಿದರು.

ADVERTISEMENT

ಮಹಾರಾಷ್ಟ್ರ ಕಡೆಯಿಂದ ಬಂದ ಅವರನ್ನು ಪರಿಸರ ಕಾರ್ಯಕರ್ತ ಕಿರಣ್ ನಿಪ್ಪಾಣಿಕರ್ ಮೊದಲಾದವರು ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.