ADVERTISEMENT

ಗೋಕರ್ಣ: ಸ್ಥಳೀಯರನ್ನು ಭಯಗೊಳಿಸಿದ ‘ಶೆಲ್’

ಗೋಕರ್ಣ ಸಮೀಪದ ಗಂಗೆಕೊಳ್ಳಕ್ಕೆ ತೇಲಿಬಂದ ಬಿಳಿ ಬಣ್ಣದ ವಸ್ತು

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 13:20 IST
Last Updated 28 ಜೂನ್ 2019, 13:20 IST
ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿ ಶುಕ್ರವಾರ ಸಿಕ್ಕಿದ ಫ್ರಾನ್ಸ್ ನೌಕಾದಳದ ಶೆಲ್
ಗೋಕರ್ಣ ಸಮೀಪದ ಗಂಗೆಕೊಳ್ಳದಲ್ಲಿ ಶುಕ್ರವಾರ ಸಿಕ್ಕಿದ ಫ್ರಾನ್ಸ್ ನೌಕಾದಳದ ಶೆಲ್   

ಗೋಕರ್ಣ: ನೌಕಾಪಡೆಯವರು ಆಳ ಸಮುದ್ರದಲ್ಲಿ ಸೂಚನೆ ನೀಡಲು ಬಳಸುವ ಶೆಲ್ ಒಂದು ಸಮೀಪದ ಗಂಗೆಕೊಳ್ಳಕ್ಕೆ ಶುಕ್ರವಾರ ಬೆಳಿಗ್ಗೆತೇಲಿ ಬಂದು ಸ್ಥಳೀಯರು ಹೌಹಾರಿದರು.ಅದುಬಾಂಬ್ ಇರಬಹುದು ಎಂದುಭಾವಿಸಿದ್ದರಿಂದ ಆತಂಕಮೂಡಿತ್ತು.

ಬಿಳಿ ಬಣ್ಣದ ಶೆಲ್‌ನಮೇಲೆ ‘ಅಪಾಯ’ (ಡೇಂಜರ್) ಎಂದು ಬರೆದಿದ್ದೇ ರಾದ್ಧಾಂತಕ್ಕೆಕಾರಣವಾಗಿತ್ತು. ಅದನ್ನು ಕಂಡ ಸ್ಥಳೀಯರು, ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ. ಸಂತೋಷಕುಮಾರ್.ಎಂ ಅವರ ಗಮನಕ್ಕೆ ತಂದರು. ಸ್ಥಳಕ್ಕೆ ತೆರಳಿ ಪರೀಕ್ಷಿಸಿದಾಗ ಅದು ಸೂಚನೆ ನೀಡಲು ಬಳಸುವ ಶೆಲ್ ಎಂದು ಗೊತ್ತಾಯಿತು.

ಯಾವುದಕ್ಕೆ ಬಳಕೆ?: ನೌಕೆಯು ಆಳ ಸಮುದ್ರದಲ್ಲಿ ಹೋಗುತ್ತಿರುವಾಗ ಅದರ ಕೆಳಭಾಗದಲ್ಲಿ ಏನಾದರೂ ಅವಘಡವಾದರೆ ಎಚ್ಚರಿಕೆನೀಡಲು ಇದನ್ನು ಬಳಕೆ ಮಾಡುತ್ತಾರೆ. ಇದರಿಂದ ಬಾಂಬ್‌ನಂತಹ ಅಪಾಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದಾಗ ಸ್ಥಳೀಯರು ನಿರಾಳರಾದರು.

ADVERTISEMENT

‘ಜೂನ್ ತಿಂಗಳಿನಲ್ಲಿ ಭಾರತೀಯ ನೌಕಾಪಡೆ ಮತ್ತುಫ್ರಾನ್ಸ್ ನೌಕಾಪಡೆಗಳು ಈ ಭಾಗದಲ್ಲಿ ಜಂಟಿ ಸಮಾರಾಭ್ಯಾಸ ಮಾಡಿದ್ದವು. ಆಗ ಈ ಶೆಲ್ ಕಣ್ತಪ್ಪಿ ನೀರಿಗೆ ಬಿದ್ದು ಈಗತೇಲಿ ಬಂದಿರಬಹುದು ಎಂದು ಊಹಿಸಲಾಗಿದೆ. ಅದರ ಮೇಲೆ ಫ್ರೆಂಚ್ ಭಾಷೆಯಲ್ಲಿ ಬರೆಯಲಾಗಿದೆ. ಈ ವಿಚಾರವನ್ನುಕಾರವಾರದ ನೌಕಾಪಡೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಪಿ.ಎಸ್.ಐ. ಸಂತೋಷಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.