ADVERTISEMENT

ಪುರಸಭೆ ಸೋಲು: ಬಿಎಸ್‌ವೈಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 18:25 IST
Last Updated 3 ಜೂನ್ 2019, 18:25 IST

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರ ಪುರಸಭೆ ಅಧಿಕಾರ ಬಿಜೆಪಿ ಕೈತಪ್ಪಿದೆ. ಎರಡು ದಶಕಗಳ ನಂತರ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ.

23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 12, ಬಿಜೆಪಿ 8 ಹಾಗೂ ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಪಡೆದಿದ್ದಾರೆ.

ಯಡಿಯೂರಪ್ಪ ಅವರು ಇದೇ ಪಟ್ಟಣ ಪಂಚಾಯಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ (1975) ರಾಜಕೀಯ ಜೀವನ ಆರಂಭಿಸಿದ್ದರು. ನಂತರ 1983ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಆಯ್ಕೆಯಾಗಿದ್ದರು. 2018ರವರೆಗೂ ನಡೆದ 9 ಚುನಾವಣೆಗಳಲ್ಲಿ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರಾಬಲ್ಯದ ತವರಿನಲ್ಲೇ ಪಕ್ಷ ಸೋಲು ಕಾಣುವ ಮೂಲಕ ಮುಖಭಂಗವಾಗಿದೆ.

ADVERTISEMENT

ಅಭ್ಯರ್ಥಿ ಆಯ್ಕೆಯಲ್ಲಿ ಏಕ ಪಕ್ಷೀಯ ನಿರ್ಧಾರ, ಲೋಕಸಭಾ ಚುನಾವಣೆಯ ಗೆಲುವಿನಲ್ಲೇ ಮೈಮರೆತು ಪುರಸಭೆಯ ಕೊನೆಯ ಅವಧಿ ನಿರ್ಲಕ್ಷ್ಯ, ಕಾಂಗ್ರೆಸ್‌ ಮುಖಂಡರ ಸಾಮರ್ಥ್ಯ ಕಡೆಗಣನೆ, ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.