ADVERTISEMENT

ಭಕ್ತರಿಗೆ ಮಠದ ಅಂಗಳದಲ್ಲೇ ಪ್ರಸಾದ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 19:51 IST
Last Updated 22 ಜನವರಿ 2019, 19:51 IST

ತುಮಕೂರು: ಸ್ವಾಮೀಜಿ ದರ್ಶನಕ್ಕೆ ಬಂದ ಭಕ್ತರಿಗೆ 10 ಕಡೆ ಪ್ರಸಾದ ವ್ಯವಸ್ಥೆಯನ್ನು ಮಠದ ಆಡಳಿತ ಮಂಡಳಿಯು ಮಾಡಿತ್ತು.

ಸೋಮವಾರ ಮಧ್ಯಾಹ್ನದಿಂದ ಮಂಗಳವಾರ ಸಂಜೆಯವರೆಗೂ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದರು. ಗೋಸಲ ಸಿದ್ದೇಶ್ವರ ವೇದಿಕೆ ಪಕ್ಕದ ವಸ್ತು ಪ್ರದರ್ಶನ ಮೈದಾನದಲ್ಲಿ, ಮಠಕ್ಕೆ ಹೊಂದಿಕೊಂಡಂತೆ ಇರುವ ರಾಗಿ ಹೊಲದಲ್ಲಿ, ಮಠದ ಎರಡು ಪ್ರಸಾದ ನಿಲಯಗಳಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪಾಯಸ, ಅನ್ನ, ಸಾಂಬಾರು, ಮಜ್ಜಿಗೆ, ಉಪ್ಪಿಟ್ಟನ್ನು ನೀಡಲಾಯಿತು. ನೂರಾರು ಸ್ವಯಂ ಸೇವಕರು, ಮಠದ ಸಿಬ್ಬಂದಿ, ಶಿಕ್ಷಕರು, ಭಕ್ತರು, ಅಭಿಮಾನಿಗಳು ಪ್ರಸಾದ ಬಡಿಸುವ ಕಾರ್ಯದಲ್ಲಿ ಶ್ರಮಿಸಿದರು. ನಗರದ ಎಲ್ಲೆಡೆ ದಿನದ 24 ಗಂಟೆಯೂ ಪ್ರಸಾದದ ವ್ಯವಸ್ಥೆ ಇತ್ತು. ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.