ADVERTISEMENT

ಸಿಎಂ ಭೇಟಿ: ಅಂಜನಾದ್ರಿಯಲ್ಲಿ ಅಂಗಡಿ ಬಂದ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2023, 8:43 IST
Last Updated 14 ಮಾರ್ಚ್ 2023, 8:43 IST
   

ಆಂಜನಾದ್ರಿ (ಗಂಗಾವತಿ): ಅಂಜನಾದ್ರಿಗೆ ಮುಖ್ಯಮಂತ್ರಿ ಭೇಟಿ ನೀಡುವ ಕಾರ್ಯಕ್ರಮ ಮಂಗಳವಾರ ನಿಯೋಜನೆಯಾಗಿದ್ದರಿಂದ ಬೆಟ್ಟದ ಕೆಳಗಿನ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು.

ಅಂಜನಾದ್ರಿ ಬೆಟ್ಟದ ಕೆಳಗೆ ಎರಡೂ ಬದಿಗಳಲ್ಲಿ ಪೂಜಾ ಸಾಮಗ್ರಿಗಳ, ತಂಪು ಪಾನೀಯ ಮಾರುವ ಅಂಗಡಿಗಳು ಇವೆ. ಬೆಟ್ಟಕ್ಕೆ ಬರುವ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಈ ಅಂಗಡಿಗಳೇ ಆಸರೆಯಾಗಿದ್ದವು. ಬಿರು‌ಬಿಸಿಲಿನ ನಡುವೆ ಪ್ರವಾಸಿಗರು ಪರದಾಡಬೇಕಾಯಿತು.

ಪೂರ್ಣಕುಂಭ ಸ್ವಾಗತ: ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರಿಗೆ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ಪೂರ್ಣಕುಂಭ ಸ್ವಾಗತ‌ ನೀಡಲಾಯಿತು.

ADVERTISEMENT

ಪುರೋಹಿತರಾದ ಫಣಿ ರಾಮಚಂದ್ರ, ನಾಗರಾಜ ಭಟ್ಟ, ಕೀರ್ತಿನಾಥ ಭಟ್ಟ ಹಾಗೂ ತಿರುಮಲ ಭಟ್ಟ ಅವರು ಪೂಜಾ ಕೈಂಕರ್ಯ ನೆರವೇರಿಸಿದರು.

ಬಳಿಕ ಬೆಟ್ಟದ ಪಕ್ಕದ ಜಮೀನಿನಲ್ಲಿ ಪ್ರವಾಸೋದ್ಯಮ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದಲ್ಲಿ ನಡೆದ ವೇದಿಕೆಯ ಸಮಾರಂಭದಲ್ಲಿ ಪ್ರವಾಸಿ ಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಪ್ರದಕ್ಷಣ ಪಥ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆ ಸಚಿವ ಹಾಲಪ್ಪ ಆಚಾರ್, ತೋಟಗಾರಿಕಾ ಸಚಿವ ಕೆ. ಮುನಿರತ್ನ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಅಮರೇಗೌಡ ಪಾಟೀಲ ಬಯ್ಯಾಪುರ, ಬಸವರಾಜ ಧಢೇಸೂಗೂರು, ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು, ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಾ ಚತುರ್ವೇದಿ ಇದ್ದರು.

****

₹21.51 ಕೋಟಿ ವೆಚ್ಚದ ಕಾಮಗಾರಿ

ಅಂಜನಾದ್ರಿ ಅಭಿವೃದ್ಧಿಗೆ ಒಟ್ಟು ₹120 ಕೋಟಿ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ₹21.51 ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.