ADVERTISEMENT

ವಿದ್ಯುತ್‌ ಶಾರ್ಟ್‌ ಸರ್ಕಿಟ್: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 7:31 IST
Last Updated 17 ಜೂನ್ 2019, 7:31 IST
ನಾಗಪ್ರಕಾಶ್
ನಾಗಪ್ರಕಾಶ್   

ಬಂಗಾರಪೇಟೆ: ವಿದ್ಯುತ್‌ ಶಾರ್ಟ್ ಸರ್ಕಿಟ್ ಸಂಭವಿಸಿ ಕೋಲಾರ ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಟಿ.ಎಸ್.ನಾಗಪ್ರಕಾಶ್ (58) ಇಲ್ಲಿನ ಸ್ವಗೃಹದಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

ಅವರ ಪತ್ನಿ ಶೋಭಾ, ಪುತ್ರ ಸ್ವರೂಪ್ ಗಾಯಗೊಂಡಿದ್ದು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಗಪ್ರಕಾಶ್ ಅವರ ತಂದೆ ಸತ್ಯನಾರಾಯಣ ಹಾಗೂ ಸೊಸೆ ಅಂಕಿತಾ ಅಪಾಯದಿಂದ ಪಾರಾಗಿದ್ದಾರೆ.

ಬೆಳಗಿನ ಜಾವ ನಾಲ್ಕರ ಸಮಯದಲ್ಲಿ ಮನೆಯಲ್ಲಿ ಶಾರ್ಟ್ ಸರ್ಕಿಟ್ ಸಂಭವಿಸಿ ಟಿವಿ, ಇನ್ನಿತರ ವಸ್ತುಗಳಿಗೆ ಬೆಂಕಿ ಹತ್ತಿಕೊಂಡಿದೆ. ದಟ್ಟ ಹೊಗೆ ಆವರಿಸಿದೆ. ನಾಗಪ್ರಕಾಶ್ ಅವರಿಗೆ ಬೆಂಕಿ ತಗುಲಿದೆ. ಅಲ್ಲದೆ ದಟ್ಟಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ. ಅವರ ದೇಹ ಸುಟ್ಟು ಕರಕಲಾಗಿತ್ತು. ಪಟ್ಟಣದ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.