ADVERTISEMENT

‘ಶೌರ್ಯ’ ಪ್ರಶಸ್ತಿ ಅನುದಾನ 5 ಪಟ್ಟು ಹೆಚ್ಚಳ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 21:28 IST
Last Updated 16 ಡಿಸೆಂಬರ್ 2021, 21:28 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಳಗಾವಿ: ‘ಶೌರ್ಯ ಪ್ರಶಸ್ತಿ ವಿಜೇತ ಯೋಧರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿ ನೀಡುವ ಅನುದಾನದ ಮೊತ್ತವನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, ಸರಾಸರಿ 5 ಪಟ್ಟು ಹೆಚ್ಚಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಭಾರತವು 1971ರಲ್ಲಿ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರವು (ಎಂಎಲ್ಐಆರ್‌ಸಿ) ಗುರುವಾರ ಆಯೋಜಿಸಿದ್ದ ‘ವಿಜಯ ದಿವಸ’ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಮವೀರ ಚಕ್ರಕ್ಕೆ ₹ 25 ಲಕ್ಷದಿಂದ ₹ 1.5 ಕೋಟಿ, ಮಹಾವೀರ ಚಕ್ರಕ್ಕೆ ₹ 12 ಲಕ್ಷ‌ದಿಂದ ₹ 1 ಕೋಟಿ, ಅಶೋಕ ಚಕ್ರಕ್ಕೆ ₹ 25 ಲಕ್ಷದಿಂದ ₹ 1.5 ಕೋಟಿ, ಕೀರ್ತಿ ಚಕ್ರಕ್ಕೆ ₹ 12 ಲಕ್ಷದಿಂದ ₹ 1 ಕೋಟಿ, ವೀರ ಚಕ್ರ ಹಾಗೂ ಶೌರ್ಯ ಚಕ್ರಗಳಿಗೆ ತಲಾ ₹ 8 ಲಕ್ಷದಿಂದ ₹ 50 ಲಕ್ಷಕ್ಕೆ ಹಾಗೂ ಭೂಸೇನಾ, ನೌಕಾಪಡೆ ಹಾಗೂ ವಾಯುಪಡೆ ಪದಕಕ್ಕೆ ತಲಾ ₹ 2 ಲಕ್ಷದಿಂದ ₹ 15 ಲಕ್ಷಕ್ಕೆ ಮತ್ತು ‘ಮೆನ್ ಶನ್ ಎಎನ್‌ಡಿಎಸ್ ಪ್ಯಾಚ್’ಗೆ ₹ 2 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.