ADVERTISEMENT

ಶ್ರೀಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ ನಿಧನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:56 IST
Last Updated 30 ಏಪ್ರಿಲ್ 2021, 15:56 IST
ಎಸ್.ಎನ್. ಸುಯಮೀಂದ್ರಾಚಾರ್ ನಿಧನ
ಎಸ್.ಎನ್. ಸುಯಮೀಂದ್ರಾಚಾರ್ ನಿಧನ   

ರಾಯಚೂರು: ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ (54) ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.

ಮಠದ ಪೂರ್ವ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥರ ಪೂರ್ವಾಶ್ರಮದ ಪುತ್ರ ಸುಯಮೀಂದ್ರಾಚಾರ್. ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೋವಿಡ್ ದೃಢವಾಗಿದ್ದರಿಂದ ಅವರನ್ನು ಕೆಲವು ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ದೆಹಲಿಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.