ಮೈಸೂರು: ಮೈಸೂರು ವಿಮಾನ ನಿಲ್ದಾಣದ ಹೊರಗೆ ಮಾಧ್ಯಮಗಳ ಮುಂದೆಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಕಾಂಗ್ರೆಸ್ ಬೆಂಬಲಿಗರೊಬ್ಬರ ಕೆನ್ನೆಗೆ ಹೊಡೆದಿದ್ದಾರೆ.
ಸಿದ್ದರಾಮಯ್ಯಅವರಲ್ಲಿ ಆ ವ್ಯಕ್ತಿ ನಿರಂತರವಾಗಿ ಶಿಫಾರಸು ಮಾಡಲು ಒತ್ತಾಯಿಸಿದ್ದರು. ಇದರಿಂದ ಸಿಟ್ಟುಗೊಂಡು ಸಿದ್ದರಾಮಯ್ಯ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಮೈಸೂರಿನ ಮಹಾತ್ಮ ಗಾಂಧಿ ಚೌಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬುಧವಾರ ಮುಂಜಾನೆ ಪ್ರತಿಭಟನೆ
ಸಿದ್ದರಾಮಯ್ಯ ಕ್ಷಮೆ ಕೇಳಲಿ
ಸಿದ್ದರಾಮಯ್ಯ ಅವರ ವರ್ತನೆ ಖಂಡನೀಯ. ಅವರು ಕ್ಷಮೆ ಕೇಳಬೇಕು ಎಂದು ಟೈಮ್ಸ್ ನೌ ವಾಹಿನಿ ಜತೆ ಮಾತನಾಡಿದ ಕರ್ನಾಟಕದ ಬಿಜೆಪಿ ವಕ್ತಾರ ಪ್ರಕಾಶ್ .ಎಸ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.