ADVERTISEMENT

ಸಿಕ್ಕಿಂ: ಸುರಕ್ಷಿತ ಸ್ಥಳಕ್ಕೆ ಕನ್ನಡಿಗರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2023, 15:59 IST
Last Updated 5 ಅಕ್ಟೋಬರ್ 2023, 15:59 IST
<div class="paragraphs"><p>ಸಿಕ್ಕಿಂ ಪ್ರವಾಹದ ದೃಶ್ಯ</p></div>

ಸಿಕ್ಕಿಂ ಪ್ರವಾಹದ ದೃಶ್ಯ

   

-ರಾಯಿಟರ್ಸ್‌ ಚಿತ್ರ

ಬೆಂಗಳೂರು: ಸಿಕ್ಕಿಂ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿದ್ದ ಬೆಂಗಳೂರಿನ 17 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.

ADVERTISEMENT

ನಾಗರಭಾವಿಯ ಟ್ರಾವೆಲ್ಸ್‌ ಏಜೆನ್ಸಿ ಮೂಲಕ ಉತ್ತರ ಭಾರತದ ಪ್ರವಾಸಕ್ಕೆ ತೆರಳಿದ್ದವರು ಮೇಘಸ್ಫೋಟ ನಡೆದಾಗ ಉತ್ತರ ಸಿಕ್ಕಿಂನಲ್ಲಿ ಸಿಲುಕಿದ್ದರು. ವಾಹನಕ್ಕೆ ಡೀಸೆಲ್‌ ತುಂಬಿಸಿಕೊಳ್ಳಲು ಸಾಧ್ಯವಾಗದೆ ಪರದಾಡಿದ್ದರು. ಇಂದ್ರೇನಿ ಉಕ್ಕಿನ ಸೇತುವೆ ತೀಸ್ತಾನದಿ ನೀರಿನಿಂದ ಕೊಚ್ಚಿಹೋಗಿದ್ದರಿಂದ ಸಂಪರ್ಕವೂ ಕಡಿತಗೊಂಡಿತ್ತು. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದರು. ಸ್ಥಳೀಯರು, ಸೇನೆಯ ನೆರವಿನಿಂದ  ಸುರಕ್ಷಿತ ಸ್ಥಳ ತಲುಪಿದ್ದಾರೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.