ADVERTISEMENT

ಎಸ್‌ಐಟಿ: ಹೊರಬೀಳದ ಆದೇಶ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:42 IST
Last Updated 15 ಫೆಬ್ರುವರಿ 2019, 19:42 IST

ಬೆಂಗಳೂರು: ‘ಆಪರೇಷನ್‌ ಕಮಲ’ದ ಆಡಿಯೊ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ರಚನೆಯ ಆದೇಶ ಇನ್ನೂ ಹೊರಬಿದ್ದಿಲ್ಲ.

ಆಡಿಯೊದಲ್ಲಿ ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್ ಕುಮಾರ್ ಅವರಿಗೆ ₹50 ಕೋಟಿ ಕೊಡಲಾಗಿದೆ ಎಂಬ ಹೇಳಿಕೆ ಇತ್ತು. ‘ಆಡಿಯೊದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿದ್ದರಿಂದ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಿ ನೆಮ್ಮದಿ ಕೊಡಬೇಕು’ ಎಂದು ರಮೇಶ್‌ ಕುಮಾರ್, ವಿಧಾನಸಭೆಯಲ್ಲಿ ಫೆ.11ರಂದು ಹೇಳಿದ್ದರು.

ತನಿಖಾ ತಂಡವನ್ನು ರಚಿಸಿ ಪ್ರಾಮಾಣಿಕ ಅಧಿಕಾರಿ ಗಳನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಫೆ.13ರ ಸಂಜೆ ತಿಳಿಸಿದ್ದರು. ಸಭಾಧ್ಯಕ್ಷರು ಸಲಹೆ ನೀಡಿ ಆರು ದಿನಗಳು ಹಾಗೂ ಮುಖ್ಯಮಂತ್ರಿ ಹೇಳಿಕೆ ನೀಡಿ 3 ದಿನಗಳು ಕಳೆದರೂ ತಂಡ ರಚನೆಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.