ADVERTISEMENT

ಹುಣಸೋಡು ಸ್ಫೋಟ ಪ್ರಕರಣ: ತನಿಖೆಗೆ ಆರು ತಂಡಗಳ ರಚನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:55 IST
Last Updated 25 ಜನವರಿ 2021, 16:55 IST
ಹುಣಸೋಡು ದುರ್ಘಟನೆ ಸ್ಥಳ
ಹುಣಸೋಡು ದುರ್ಘಟನೆ ಸ್ಥಳ   

ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದ ಬಗ್ಗೆ ಪ್ರತಿದಿನವೂ ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿದ್ದು, ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಲು ಆರು ತಂಡಗಳನ್ನು ರಚಿಸಲಾಗಿದೆ.

ಬಂಧನ: ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ. ಸ್ಫೋಟದ ಸ್ಥಳದಿಂದ ಸ್ಪಲ್ಪ ದೂರದಲ್ಲಿ ಸೋಮವಾರ 10 ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ತನಿಖೆ ಚುರುಕುಗೊಳ್ಳಲು ಇದು ಪುಷ್ಟಿ ನೀಡಿದೆ. ತನಿಖೆಗೆ ಅನುಕೂಲ
ವಾಗಬಹುದಾದ ಮತ್ತಷ್ಟು ವಸ್ತುಗಳು ಸಿಗುವ ಸಾಧ್ಯತೆ ಇದೆ ಎಂದು ಪೂರ್ವ ವಲಯದ ಐಜಿಪಿ ಎಸ್. ರವಿ ತಿಳಿಸಿದರು.

ಅಕ್ರಮ ಕಲ್ಲು ಗಣಿಗಾರಿಕೆಗೆ ಬಳಸುವ ಸ್ಫೋಟಕ ವಸ್ತುಗಳು ಎಲ್ಲಿಂದ ಬರುತ್ತವೆ? ಅವನ್ನು
ಸರಬರಾಜು ಮಾಡಿದವರಾರು? ಇದರ ಹಿಂದೆ ಯಾರ ಕೈವಾಡವಿದೆ? ಪ್ರತಿ ತಿಂಗಳು ಅಪಾರ ಪ್ರಮಾಣದಲ್ಲಿ ಈ ಸ್ಫೋಟಕಗಳು ಕ್ವಾರೆಗಳನ್ನು ಹೇಗೆ ತಲುಪುತ್ತವೆ ಎಂಬ ಮಾಹಿತಿ ತನಿಖೆಯಿಂದ ಹೊರಬರಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.