ಬೆಂಗಳೂರು: ಸ್ವೀಡನ್ ಮೂಲದ ಎಸ್‌ಕೆಎಫ್ ಕಂಪನಿ ಮೈಸೂರಿನಲ್ಲಿರುವ ತನ್ನ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ತೀರ್ಮಾನಿಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಯಂತ್ರೋಪಕರಣ ಸೇರಿ ವಿವಿಧ ಕಡೆಗಳಲ್ಲಿ ಸೋರಿಕೆ, ಒತ್ತಡ ತಡೆಯುವ ಉದ್ದೇಶದಿಂದ ವಿವಿಧ ಬಗೆಯ ಮುದ್ರೆಗಳನ್ನು (ಸೀಲ್ಸ್) ಎಸ್‌ಕೆಎಫ್ ತಯಾರಿಸುತ್ತಿದೆ. ಸ್ವೀಡನ್ ಪ್ರವಾಸದಲ್ಲಿರುವ ಸಚಿವ ಪಾಟೀಲ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಮಂಗಳವಾರ ನಡೆದ ಸಭೆಯಲ್ಲಿ ಎಸ್‌ಕೆಎಫ್ ಸಿಇಒ ಅನ್ನಿಕಾ ಓಲ್ಮೆ ಅವರು ಈ ವಿಷಯ ತಿಳಿಸಿದರು.
ಅಲ್ಲದೇ, ಬೆಂಗಳೂರಿನಲ್ಲಿ ತನ್ನ ವಹಿವಾಟು ಹೆಚ್ಚಿಸಲು ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವುದಾಗಿಯೂ ಅನ್ನಿಕಾ ಓಲ್ಮೆ ಅವರು ಭರವಸೆ ನೀಡಿದರು.
ದೂರಸಂಪರ್ಕ ಮತ್ತು 5 ಜಿ ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಎರಿಕ್ಸನ್ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಸಚಿವ ಪಾಟೀಲ ಅವರು, ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಮನವಿ ಮಾಡಿದರು. ಗೆಟಿಂಗ್ ಗ್ರೂಪ್‌ನ ಅಧಿಕಾರಿಗಳ ಜತೆಯೂ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.