ಎಸ್.ಎಲ್. ಭೈರಪ್ಪ ತಮ್ಮ ಕಾದಂಬರಿಗಳ ಮೂಲಕ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರರಾಜ್ಯ, ದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಓದುಗರನ್ನು ಪಡೆದಿದ್ದವರು. ಹಾಗೆಯೇ ತಮ್ಮ ಕಾದಂಬರಿಗಳ ತಾತ್ವಿಕ ನಿಲುವುಗಳಿಂದ ಹಲವು ರೀತಿಯ ಚರ್ಚೆ, ವಿವಾದಗಳನ್ನೂ ಹುಟ್ಟುಹಾಕಿದವರು. ಕಾದಂಬರಿಕಾರರಾಗಿ ಅಪಾರ ಜನಪ್ರಿಯತೆ ಗಳಿಸಿದರೂ ಭೈರಪ್ಪನವರ ತಾತ್ವಿಕ ದೃಷ್ಟಿಕೋನವು ಅನೇಕ ಚರ್ಚೆಗಳಿಗೆ, ವಿವಾದಗಳಿಗೆ ಗುರಿಯಾಯಿತು. ಧರ್ಮವನ್ನು ಕುರಿತ, ಹೆಣ್ಣನ್ನು ಕುರಿತ ಅವರ ನಿಲುವು ಪ್ರತಿಗಾಮಿಯಾದದ್ದು ಎನ್ನುವುದು ಕೆಲವು ವಿಮರ್ಶಕರ ಟೀಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.