ADVERTISEMENT

ಸ್ಮಾರ್ಟ್‌ ಸಿಟಿ ಪ್ರಸ್ತಾಪಿಸಿದ ಸಿಎಂ: ಜನರಿಂದ ತೀವ್ರ ಆಕ್ಷೇಪ, ಬೊಮ್ಮಾಯಿಗೆ ಮುಜುಗರ

​ಪ್ರಜಾವಾಣಿ ವಾರ್ತೆ
Published 1 ಮೇ 2023, 19:42 IST
Last Updated 1 ಮೇ 2023, 19:42 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಮೈಸೂರು: ‘ಸ್ಮಾರ್ಟ್‌ ಸಿಟಿ ಯೋಜನೆಗೆ ಮೈಸೂರು ಆಯ್ಕೆಯಾಗಿದ್ದು ₹ 1 ಸಾವಿರ ಕೋಟಿ ಅನುದಾನ ನೀಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಪ್ರಸಂಗ ಸೋಮವಾರ ನಡೆಯಿತು. ಇದರಿಂದ ಬೊಮ್ಮಾಯಿ ಮುಜುಗರ ಅನುಭವಿಸಿದರು.

ನಗರದ ಚಾಮರಾಜ ಕ್ಷೇತ್ರದ ಮಂಚೇಗೌಡನ ಕೊಪ್ಪಲಿನಲ್ಲಿ ಸಂಜೆ ರೋಡ್‌ ಶೋ ವೇಳೆ ಅವರು ತಮ್ಮ ಭಾಷಣದಲ್ಲಿ, ‘ಸ್ಮಾರ್ಟ್‌ ಸಿಟಿ’ಗೆ ಸಾವಿರ ಕೋಟಿ ಅನುದಾನ ನೀಡಲಾಗಿದೆ’ ಎಂದಿದ್ದಕ್ಕೆ, ಸ್ಥಳದಲ್ಲಿದ್ದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.  ‘ತಾಂತ್ರಿಕ ಕಾರಣದಿಂದ ನಗರವನ್ನು ಯೋಜನೆಗೆ ಆಯ್ಕೆ ಮಾಡಿಲ್ಲ. ಆದರೂ ಹಣ ಹೇಗೆ ಬಿಡುಗಡೆಯಾಯಿತು’ ಎಂದು ಜನರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT