ADVERTISEMENT

ಎಕ್ಸ್ ಪ್ರೆಸ್ ರೈಲುಗಳ ಪ್ರಾಯೋಗಿಕ ನಿಲುಗಡೆ ಮುಂದುವರಿಕೆ: ದಕ್ಷಿಣ ಮಧ್ಯ ರೈಲ್ವೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 12:52 IST
Last Updated 13 ಫೆಬ್ರುವರಿ 2026, 12:52 IST
<div class="paragraphs"><p>ರೈಲು (ಸಾಂದರ್ಭಿಕ  ಚಿತ್ರ)</p></div>

ರೈಲು (ಸಾಂದರ್ಭಿಕ ಚಿತ್ರ)

   

ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ಎಕ್ಸ್ ಪ್ರೆಸ್ ರೈಲುಗಳಿಗೆ ನೀಡಲಾಗಿದ್ದ ಪ್ರಾಯೋಗಿಕ ನಿಲುಗಡೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಮುಂದುವರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ಅದರಂತೆ, ರೈಲು ಸಂಖ್ಯೆ 17212 ಯಶವಂತಪುರ–ಮಚಲಿಪಟ್ಟಣಂ ಕೊಂಡವೀಡು ಟ್ರೈ-ವೀಕ್ಲಿ ಎಕ್ಸ್ ಪ್ರೆಸ್ ಕಂಬಂ ನಿಲ್ದಾಣದಲ್ಲಿ, ರೈಲು ಸಂಖ್ಯೆ 22683 ಯಶವಂತಪುರ–ಲಖನೌ ಸಾಪ್ತಾಹಿಕ ಸೂಪರ್’ಫಾಸ್ಟ್ ಎಕ್ಸ್ ಪ್ರೆಸ್ ಅನಂತಪುರ ನಿಲ್ದಾಣದಲ್ಲಿ ಹಾಗೂ ರೈಲು ಸಂಖ್ಯೆ 16593 ಯಶವಂತಪುರ–ನಾಂದೇಡ್ ಮತ್ತು 16594 ನಾಂದೇಡ್–ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲುಗಳು ನಗರೂರು ನಿಲ್ದಾಣದಲ್ಲಿನ ನಿಲುಗಡೆಯನ್ನು ಮುಂದುವರಿಸಲಿವೆ.

ADVERTISEMENT

ವಿಶಾಖಪಟ್ಟಣ-ಬೆಂಗಳೂರು ವಿಶೇಷ ರೈಲು ಸಂಚಾರ ವಿಸ್ತರಣೆ

ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ವಿಶಾಖಪಟ್ಟಣ ಮತ್ತು ಎಸ್ಎಂವಿಟಿ ಬೆಂಗಳೂರು ನಡುವಿನ ವಿಶೇಷ ರೈಲು ಸೇವೆಗಳನ್ನು ವಿಸ್ತರಿಸಲಾಗುವುದು ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.

  • ವಿಶಾಖಪಟ್ಟಣದಿಂದ ಪ್ರತಿ ಭಾನುವಾರ ಹೊರಡುವ ರೈಲು ಸಂಖ್ಯೆ 08581 ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಈ ಮೊದಲು 2026ರ ಫೆ. 22ರವರೆಗೆ ಸಂಚರಿಸಲು ಮಾತ್ರ ನಿಗದಿಯಾಗಿತ್ತು. ಇದೀಗ ಇದನ್ನು 2026ರ ಮಾರ್ಚ್ 1 ರಿಂದ 29 ರವರೆಗೆ ವಿಸ್ತರಿಸಲಾಗಿದೆ.

  • ಎಸ್ಎಂವಿಟಿ ಬೆಂಗಳೂರಿನಿಂದ ಪ್ರತಿ ಸೋಮವಾರ ಹೊರಡುವ ರೈಲು ಸಂಖ್ಯೆ 08582 ಎಸ್ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಈ ಮೊದಲು 2026ರ ಫೆ. 23ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಇದೀಗ ಇದನ್ನು 2026ರ ಮಾರ್ಚ್ 2 ರಿಂದ 30ವರೆಗೆ ವಿಸ್ತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.