ಬಳ್ಳಾರಿ: ನಟ ಅಂಬರೀಶ್ ನಿಧನರಾಗಿ ಹನ್ನೊಂದನೇ ದಿನದ ಸ್ಮರಣೆಗಾಗಿ ಸಿರುಗುಪ್ಪ ತಾಲ್ಲೂಕಿನ ಬಗ್ಗೂರಿನ ಅಭಿಮಾನಿ ಅಂಬರೀಶ್ ಮತ್ತು ಸಿದ್ದಮ್ಮ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ನಗರದ ಕನಕ ದುರ್ಗಮ್ಮ ಗುಡಿಯಲ್ಲಿ ಮಂಗಳವಾರ ಹನ್ನೊಂದು ತೆಂಗಿನ ಕಾಯಿ ಒಡೆದು ಹರಕೆತೀರಿಸಿದರು.
ಎರಡು ವರ್ಷದ ಹಿಂದೆ ಈ ದಂಪತಿಗೆ ಅವಧಿಗೆ ಮುನ್ನವೇ ಜನಿಸಿದ್ದ ಗಂಡು ಮಗು ಉಳಿಯುವುದಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಅಂಬರೀಶ್ ಅಭಿಮಾನಿಯಾದ ಅಂಬರೀಶ್ ತಮ್ಮ ಪತ್ನಿ, ಮಗುವಿನ ಸಮೇತ ಬೆಂಗಳೂರಿನ ಅಂಬರೀಶ್ ಮನೆಗೆ ತೆರಳಿದ್ದರು. ತನ್ನ ಜನ್ಮ ದಿನದಂದೇ ಬಂದ ಅಭಿಮಾನಿಯ ಮಗುವಿಗೆ ನಟ ಅಂಬರೀಶ್ ಕರ್ಣ ಎಂದು ಹೆಸರಿಟ್ಟಿದ್ದರು.
ನಟ ಮತ್ತು ಕರ್ಣನ ದಾನಗುಣ ಎಲ್ಲರಿಗೂ ಬರಲಿ ಎಂದು ಹರಕೆ ಹೊತ್ತ ದಂಪತಿ ದುರ್ಗಮ್ಮ ಗುಡಿಗೆ ಬಂದು ಪೂಜೆ ಸಲ್ಲಿಸಿದರು.
ದಂಪತಿಯ ಮಗಳು ಕಂಕಣ ರಣಾವತ್ ಹಾಗೂಗೆಳೆಯರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.