ADVERTISEMENT

ದೀಪಾವಳಿ ಹಬ್ಬಕ್ಕೆ ಯಶವಂತಪುರ–ಬೆಳಗಾವಿ ಸುವಿಧಾ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 18:57 IST
Last Updated 5 ಅಕ್ಟೋಬರ್ 2019, 18:57 IST

ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ನೈರುತ್ಯ ರೈಲ್ವೆಯು ಅ. 25ರಂದು ಯಶವಂತಪುರ–ಬೆಳಗಾವಿ ಸುವಿಧಾ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

25ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ. ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಅ. 29ರಂದು ಸಂಜೆ 7 ಗಂಟೆಗೆ ಬೆಳಗಾವಿಯಿಂದ ಹೊರಡುವ ವಿಶೇಷ ರೈಲು ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ಮುಟ್ಟಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.