ADVERTISEMENT

5 ಲಕ್ಷ ಕಿಟ್,1000 ವೆಂಟಿಲೇಟರ್, ಮಾಸ್ಕ್‌, ಖರೀದಿಗೆ ನಿರ್ಧಾರ– ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 6:11 IST
Last Updated 23 ಮಾರ್ಚ್ 2020, 6:11 IST
   

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಒಂದು ಸಾವಿರ ವೆಂಟಿಲೇಟರ್, 10 ಲಕ್ಷ ಎನ್ 95 ಮಾಸ್ಕ್, 5 ಲಕ್ಷ ಪಿಪಿಇ ಕಿಟ್, 15 ಲಕ್ಷ ತ್ರೀ ಲೆಯರ್ ಮಾಸ್ಕ್ ಖರೀದಿಗೆ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು‌ ಹೇಳಿದರು.

ಮಾಧ್ಯಮ ಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ರಾಜ್ಯದಲ್ಲಿ ಭಾನುವಾರದವರೆಗೆ ಕೋವಿಡ್ 19 ಸೋಂಕು ಪ್ರಕರಣ 26 ದೃಢಪಟ್ಟಿತ್ತು. ಇವತ್ತು (ಸೋಮವಾರ) ಬೆಳಿಗ್ಗೆ ಮೈಸೂರಿನಲ್ಲಿ ಇನ್ನೊಂದು ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಸಂಖ್ಯೆ 27 ಕ್ಕೆ ಏರಿಕೆಯಾಗಿದೆ ಎಂದರು.

ವೆಂಟಿಲೇಟರ್ ಪೂರೈಕೆ ಕುರಿತು ಸ್ಕಾನರ್ ರೇ ಕಂಪನಿ ಆಡಳಿತ ವ್ಯವಸ್ಥಾಪಕರ ಜೊತೆ ಚರ್ಚೆ ಮಾಡಿದ್ದೆವೆ. ಇಂದು ತಿಂಗಳ ಒಳಗೆ ವೆಂಟಿಲೇಟರ್ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದರು.

ADVERTISEMENT

ಅಲ್ಲದೆ, ಎಚ್ಎಲ್ಎಲ್ ಕಂಪನಿಯಿಂದ,5 ಲಕ್ಷ ಪಿಪಿಇ ಕಿಟ್, ಮೂರು ಲೇಯರ್ ಮಾಸ್ಕ್ 15 ಲಕ್ಷ , ಎನ್ 95 ಮಾಸ್ಕ್ 10 ಲಕ್ಷ ಖರೀ ಖರೀದಿಗೆ ನಿರ್ಧರಿಸಲಾಗಿದೆ ಎಂದರು.

ಸೋಮವಾರದಿಂದ ಜಿಲ್ಲಾ ಪ್ರವಾಸ ಮಾಡಲಾಗುತ್ತದೆ. ಖುದ್ದು ಪರಿಸ್ಥಿತಿ ಅಧ್ಯಯನ ಮಾಡಲಾಗುವುದು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ವಿವರಿಸಿದರು.

ಉಪ ಮುಖ್ಯಮಂತ್ರಿ ಡಾ. ಆಶ್ವತನಾರಾಯಣ ಮಾತನಾಡಿ, 'ಲಾಕ್ ಡೌನ್ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದೇ ಬಸ್ಸಿನಲ್ಲಿ ಹೆಚ್ಚಿನ ಜನ ಬರೋದನ್ನು ಗಮನಿಸಲಾಗುತ್ತಿದೆ. ಈ ಕುರಿತಂತೆ ಸೂಕ್ತ ಕ್ರಮ‌ ತೆಗೆದುಕೊಳ್ಳಲಾಗುವುದು ಎಂದರು.

'ಐಟಿಬಿಟಿ ಕಂಪನಿಗಳಲ್ಲಿ ಶೇ 84 ವರ್ಕ ಫ್ರಮ್ ಹೋಮ್ ಆಗಿದೆ. ಅಗತ್ಯ ಸೇವೆಗಳನ್ನು ಮಾತ್ರ ತೆರೆಯಲು ಸೂಚಿಸಲಾಗಿದೆ. ಕೊರೊನಾ ವಿರುದ್ದ ಹೋರಾಡಲು ಮೂಲಸೌಲಭ್ಯ ಕಲ್ಪಿಸಲುವ ಕೆಲಸ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.