ADVERTISEMENT

ಡಿಸಿಎಂ ಸೇವಿಸುವ ಆಹಾರ ಪರೀಕ್ಷೆಗೆ ಸ್ವಾಮೀಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 19:31 IST
Last Updated 5 ನವೆಂಬರ್ 2018, 19:31 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಸಾಣೇಹಳ್ಳಿ (ಚಿತ್ರದುರ್ಗ): ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಸೇವಿಸುವ ಆಹಾರದ ಪರೀಕ್ಷೆಗೆ ಸರ್ಕಾರಿ ಅಧಿಕಾರಿಗಳು ಮುಂದಾಗಿದ್ದಕ್ಕೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.

ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿಯೇ ಭಾನುವಾರ ರಾತ್ರಿ ಸ್ವಾಮೀಜಿ ತೀವ್ರ ಅಸಮಾಧಾನ ಹೊರಹಾಕಿದರು. ಆಗ ಪರಮೇಶ್ವರ ಹಾಗೂ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಮೀಜಿ ಪಕ್ಕದಲ್ಲಿಯೇ ಕುಳಿತಿದ್ದರು.

‘ಸಾವಿರಾರು ಭಕ್ತರು ಊಟ ಮಾಡುವ ಆಹಾರವನ್ನು ಸರ್ಕಾರಿ ಅಧಿಕಾರಿಗಳು ಎಂದೂ ಪರೀಕ್ಷೆ ಮಾಡುವುದಿಲ್ಲ. ಸಚಿವರೊಬ್ಬರು ಸೇವಿಸುವ ಆಹಾರವನ್ನು ಪರೀಕ್ಷಿಸುವುದು ದುರಂತ. ಇವರೊಬ್ಬರು ಸತ್ತರೆ ಏನೂ ಆಗುವುದಿಲ್ಲ. ಜನ ಸಾಯಬಾರದು’ ಎಂದಾಗ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.

ADVERTISEMENT

‘ಈವರೆಗೆ ಹಲವು ಸಚಿವರು ಮಠದ ಪ್ರಸಾದ ಸ್ವೀಕರಿಸಿದ್ದಾರೆ. ಆದರೆ, ಯಾರೊಬ್ಬರೂ ಆಹಾರವನ್ನು ಪರೀಕ್ಷಿಸಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.